Bollywood News: ದಂಗಲ್ ಸಿನಿಮಾದಲ್ಲಿ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿ, ಎಲ್ಲರ ಮನಸ್ಸು ಗೆದ್ದಿದ್ದ ನಟಿ ಸುಹಾನಿ ಭಟ್ನಾಗರ್, 19ನೇ ವಯಸ್ಸಿಗೆ ನಿಧನರಾಗಿದ್ದಾರೆ.
ಈಕೆಯ ಕಾಲಿನ ಮೂಳೆ ಮುರಿದಿದ್ದು, ಇದರ ಸಲುವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಾಲು ಸರಿಯಾಗಲು ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಈ ಔಷಧಿಯ ಅಟ್ಟ ಪರಿಣಾಮದಿಂದಲೇ, ಸುಹಾನಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ, ಸುಹಾನಿ ಸಾವನ್ನಪ್ಪಿದ್ದಾರೆ.
ಸುಹಾನಿ ಸಾವಿಗೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. ದಂಗಲ್ ಸಿನಿಮಾ ಮಾಡುವಾಗ ಬಬಿತಾ ಫೋಗಟ್ ಬಾಲ್ಯದ ನಟನೆಗಾಗಿ,11 ಸಾವಿರ ಹುಡುಗಿಯರನ್ನು ಸಂದರ್ಶನ ಮಾಡಲಾಗಿತ್ತು. ಆದರೆ ಕೊನೆಗೆ ಸುಹಾನಿ ಭಟ್ನಾಗರ ಈ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್