Political News: ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಕೊಡುತ್ತದೆ ಎಂಬ ಗ್ಯಾರಂಟಿ ನೀಡಿ, ಈಗ ಪದೇ ಪದೇ ಕರೆಂಟ್ ಕಟ್ ಮಾಡುತ್ತಿರುವ ಬಗ್ಗೆ, ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಬಗ್ಗೆ, ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಮನೆಯಲ್ಲಿ ಕತ್ತಲು, ಪರರಿಗೆ ದೀಪ ದಾನವೆಂಬ ಮಾತಂತಾಯಿತು ಕಾಂಗ್ರೆಸ್ ಸ್ಥಿತಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ,’ ಮನೆಯಲ್ಲಿ ಕತ್ತಲು, ಪರರಿಗೆ ದೀಪ ದಾನ’ ಇದು ಕಾಂಗ್ರೆಸ್‌ನ ಟೊಳ್ಳು ಗ್ಯಾರಂಟಿಗಳ ವ್ಯಥೆ. ರಾಜ್ಯದ ಲಕ್ಷಾಂತರ ಹೆಣ್ಣುಮಕ್ಕಳ ಕಣ್ಣಿಗೆ ಮಣ್ಣು ಎರಚಿ, ಈಗ ಬೇರೆಡೆ ರಂಗು ರಂಗಿನ ಕನಸು ಬಿತ್ತುತ್ತಿರುವ ಕಾಂಗ್ರೆಸ್ ನ ಸುಳ್ಳಿನ ಸರಮಾಲೆಗಳ ನಿಜರೂಪ ಒಂದೊಂದಾಗಿ ಹೊರಬರುತ್ತಿದ್ದು, ಕೆಲವೇ ದಿನಗಳಲ್ಲಿ ಕರ್ನಾಟಕವನ್ನು ದಿವಾಳಿಯ ಅಂಚಿಗೆ ತಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ರಾಜ್ಯದ 13 ಲಕ್ಷ ಅರ್ಹ ಮಹಿಳೆಯರಿಗೆ ಮೋಸ ಮಾಡಿ, ಕೇವಲ ಪ್ರಚಾರಕ್ಕೆಂದೇ 94ಲಕ್ಷ ರೂ, ವಿನಿಯೋಗ ಮಾಡುತ್ತಿರುವುದು ಹಾಗಲಕಾಯಿಗೆ, ಬೇವಿನಕಾಯಿ ಸಾಕ್ಷಿ ನುಡಿದಂತಿದೆ. ರಾಜ್ಯ, ದೇಶವನ್ನು ದಿವಾಳಿಗೆ ತಳ್ಳಿಯಾದರೂ ಸನ್ಮಾನ್ಯ ರಾಹುಲ್ ಗಾಂಧಿ ರವರನ್ನು ಪ್ರಧಾನಿ ಮಾಡುವ ನಿಮ್ಮ ಇಂತಹ ದುಸ್ಸಾಹಸಕ್ಕೆ ದೇಶದ ಜನತೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂಬುದು ಸ್ಪಷ್ಟ ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್ ಹತ್ಯೆ..
3 ಲಕ್ಷ ರೂ. ಟೀ ಕಪ್‌ನೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ ನೀತಾ ಅಂಬಾನಿ