- Advertisement -
Utthar Pradesh: ಉತ್ತರಪ್ರದೇಶದ ಅಯೋಧ್ಯೆಯಲ್ಲಿ 11 ದಿನಗಳ ಹಿಂದಷ್ಟೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ, ರಾಮಮಂದಿರ ಉದ್ಘಾಟನೆಯಾಗಿತ್ತು. ಅಂದಿನಿಂದ ಇಂದಿನವರೆಗೂ 25 ಲಕ್ಷ ಜನ ಭಕ್ತರು ರಾಮಲಲ್ಲಾ ದರ್ಶನಕ್ಕಾಗಿ ಬಂದಿದ್ದು, 11 ಕೋಟಿ ದೇಣಿಗೆ ಸಂಗ್ರಹವಾಗಿದೆ.
ರಾಮನ ದರ್ಶನಕ್ಕೆ ಬಂದ ಭಕ್ತರು ಹುಂಡಿಗೆ 8 ಕೋಟಿ ಕಾಣಿಕೆ ಹಾಕಿದ್ದು, ಚೆಕ್, ಆನ್‌ಲೈನ್ ಮೂಲಕ 3ವರೆ ಕೋಟಿ ಹಣ ಸಂಗ್ರಹವಾಗಿದೆ. ಇನ್ನು ನಾಲ್ಕು ಹುಂಡಿಯನ್ನು ಈ ದೇವಸ್ಥಾನದಲ್ಲಿ ಇರಿಸಲಾಗಿದ್ದು, ಹುಂಡಿ ಹಣ ಎಣಿಕೆಗಾಗಿ 11 ಬ್ಯಾಂಕ್ ಉದ್ಯೋಗಿಗಳು ಮತ್ತು ಮೂವರು ಟ್ರಸ್ಟ್‌ನ ಸಿಬ್ಬಂದಿಯನ್ನು ಸೇರಿಸಿ 14 ಜನ ಹುಂಡಿ ಹಣ ಎಣಿಸುತ್ತಾರೆ. ಇನ್ನು ಹುಂಡಿ ಎಣಿಕೆ ಕೆಲಸವೆಲ್ಲ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯುತ್ತದೆ.
ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ
- Advertisement -