ಅನಾರೋಗ್ಯದಿಂದ ಕೊನೆಯುಸಿರೆಳೆದ ದರ್ಶನ್‌ರ ಪ್ರೀತಿಯ ಬಸವ..!

ಮೈಸೂರು: ಮೈಸೂರಿನ ಕೆ.ಆರ್.ನಗರ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದ ದೇವರು ಅಂತಾನೇ ಪ್ರಸಿದ್ಧಿಯಾಗಿದ್ದ ಬಸವ ಅನಾರೋಗ್ಯದ ಸಮಸ್ಯೆಯಿಂದ ಬಳಲಿ ಇಂದು ಕಾಳಮ್ಮನ ದೇವಸ್ಥಾನದ ಮುಂದೆ ಕೊನೆಯುಸಿರೆಳೆದಿದ್ದಾನೆ.

ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಬಸವನ ಚೇತರಿಕೆಗಾಗಿ ಗ್ರಾಮಸ್ಥರು ಪೂಜೆ ಪ್ರಾರ್ಥನೆ ಮಾಡಿದ್ದರು. ಆದರೆ ಪ್ರಾರ್ಥನೆ ಫಲಿಸದೇ ಬಸವ ಸಾವನ್ನಪ್ಪಿದ್ದಾನೆ.

https://youtu.be/BdVzhEGTcOU

ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಷ್ ಪರ ಮತ ಪ್ರಚಾರದ ಜವಾಬ್ದಾರಿ ಹೊತ್ತಿದ್ದ ದರ್ಶನ್ ಮೈಸೂರಿನಲ್ಲೂ ಪ್ರಚಾರ ಮಾಡಿದ್ದರು. ಈ ವೇಳೆ ಕಾಳಮ್ಮನ ಕೊಪ್ಪಲು ಗ್ರಾಮಕ್ಕೂ ಭೇಟಿ ನೀಡಿದ್ದರು. ಆಗ ಬಸವ ದರ್ಶನ್ ವಾಹನಕ್ಕೆ ಅಡ್ಡಗಟ್ಟಿದ್ದ. ಯಾರು ಒತ್ತಾಯಿಸಿದರೂ ಬಸವ ಮಾತ್ರ ಜಾಗ ಬಿಡಲು ಕೇಳಲಿಲ್ಲ.

ಪ್ರಾಣಿಪ್ರಿಯರಾಗಿರುವ ದರ್ಶನ್ ಬಂದು ಪ್ರೀತಿಯಿಂದ ಮೈ ಸವರಿದ ನಂತರ ಬಸವ ದಾರಿ ಬಿಟ್ಟುಕೊಟ್ಟಿದ್ದ. ಆ ಸಮಯದಲ್ಲಿ ಈ ಸುದ್ದಿ ಸಖತ್ ವೈರಲ್ ಆಗಿತ್ತು.

ಬಸವನ ಆರೋಗ್ಯ ಕೆಟ್ಟಿದ್ದಾಗ ದರ್ಶನ್ ಒಮ್ಮೆ ಬಂದು ಬಸವನನ್ನು ಭೇಟಿಯಾಗಿ ಹೋಗಿದ್ದರು. ನಂತರ ಮತ್ತೆ ಆರೋಗ್ಯ ಕೆಟ್ಟಾಗ ದರ್ಶನ್ ಬಂದರೆ ಬಸವ ಸರಿಹೋಗುತ್ತಾನೆಂದು ಗ್ರಾಮಸ್ಥರು ಮನವಿ ಮಾಡಿದ್ದರು. ಲಾಕ್‌ಡೌನ್ ಇದ್ದ ಕಾರಣ ದರ್ಶನ್ ಬಸವನ ಬಳಿ ಹೋಗಲಾಗಲಿಲ್ಲ.

ಆದ್ರೆ ದರ್ಶನ್ ಪಶುವೈದ್ಯರನ್ನ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಬಸವ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

https://youtu.be/5gb4sNwZBkE

About The Author