- Advertisement -
Hubli News: ಹುಬ್ಬಳ್ಳಿ: ದರ್ವೇಶ್ ಗ್ರೂಪ್‌ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಸಿಐಡಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
ಹೌದು. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಸುಜಾ ಮೇಲೆ ದಾಳಿ ನಡೆಸಿದ್ದು, ಮನೆಯಲ್ಲಿ ಶೋಧ ನಡೆಸುತ್ತಿರುವ ಸಿಐಡಿ ಪೊಲೀಸರು ದಾಖಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈಗಾಗಲೇ ಐದು ಜನ ಆರೋಪಿಗಳ ಬಂಧಿಸಿರುವ ಸಿಐಡಿ ಅಧಿಕಾರಿಗಳು, ಈಗ ಪ್ರಮುಖ ಆರೋಪಿ ಪತ್ತೆಗೆ ದಾಳಿ ನಡೆಸಿದ್ದಾರೆ. ಹೂಡಿಕೆ ಹೆಸರಿನಲ್ಲಿ ಬಾಂಡ್‌ಗಳನ್ನ ನೀಡಿ ವಂಚಿಸಿರುವ ಪ್ರಕರಣದಲ್ಲಿ ದರ್ವೇಶಿ ಎಂಬ ಕಂಪನಿ ತೆಗೆದಿದ್ದ ವಂಚಕರು, ಹೂಡಿಕೆ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ವಂಚನೆ ಮಾಡಿದ್ದರು. ಹಣ ಕಳೆದುಕೊಂಡು ನೂರಾರು ಜನರಿಂದ ದೂರುದಾಖಲಾದ ಬೆನ್ನಲ್ಲೇ ರಾಯಚೂರು ನಗರದಲ್ಲಿ ನಡೆದಿರುವ ಬಹು ಕೋಟಿ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದಾಳಿ ನಡೆಸಿದ್ದಾರೆ.
- Advertisement -