Monday, September 9, 2024

Latest Posts

ಕುಡಿದು ವಾಹನ ಚಾಲಾಯಿಸುತ್ತಿದ್ದವರಿಗೆ ಹು-ಧಾ ಸಂಚಾರಿ ಪೊಲೀಸರ ಬಿಸಿ: ಒಂದೇ ರಾತ್ರಿ ಲಕ್ಷ ಲಕ್ಷ ದಂಡ ವಸೂಲಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರು ಶುಕ್ರವಾರ ತಡರಾತ್ರಿ ಅವಳಿ ನಗರದಲ್ಲಿ ಕುಡಿದ ಮತ್ತಿನಲ್ಲಿ ವಾಹನ ಓಡಿಸುವ ಸವಾರರಿಗೆ ಬಿಸಿ ಮುಟ್ಟಿಸಿ ಲಕ್ಷ ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಆಗುತ್ತಿದ್ದು ಸಾಕಷ್ಟು ಸಾವು ನೋವುಗಳು ಆಗುತ್ತಿರೋ ನಿಟ್ಟಿನಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಕಮಿಷನರ್ ಶಶಿಕುಮಾರ್ ಹಾಗೂ ಸಂಚಾರಿ ವಿಭಾಗದ ಡಿಸಿಪಿ ರವೀಶ್ ಸೂಚನೆ ಮೇರೆಗೆ ಫೀಲ್ಡಿಗೆ ಇಳಿದ ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಮರಳುಸಿದ್ದಪ್ಪ 9 ಪ್ರಕರಣ, ಉತ್ತರ ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್ ರಮೇಶ ಗೋಕಾಕ 8 ಪ್ರಕರಣ, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ 8 ಪ್ರಕರಣ ಹಾಗೂ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ 7 ಪ್ರಕರಣ ಸೇರಿ ಒಟ್ಟು 32 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ಮರಳುಸಿದ್ದಪ್ಪ 9 ಪ್ರಕರಣ, ಉತ್ತರ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ 8 ಪ್ರಕರಣ, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ 8 ಪ್ರಕರಣ ಹಾಗೂ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ 7 ಪ್ರಕರಣ ಸೇರಿ ಒಟ್ಟು 32 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ನಿನ್ನೆ ಒಂದೇ ರಾತ್ರಿ ಸಂಚಾರಿ ಪೊಲೀಸರು ಸುಮಾರು 320000 ರೂಪಾಯಿ ಕೇವಲ ಡ್ರಿಂಕ್ & ಡೈವ್ ಕೇಸ್‌ನಲ್ಲಿ ದಂಡವನ್ನು ವಸೂಲಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೆ ಸಂಚಾರಿ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರು ಕೂಡಾ ವಾಹನ ಸವಾರರು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಡ್ರಿಂಕ್ & ಡೈವ್ ಕೇಸ್ ಪ್ರಕರಣಗಳ ಬೇಟಿ ಪೊಲೀಸರು ಫಿಲ್ಡಿಗೆ ಇಳಿದಿದ್ದಾರೆ.

- Advertisement -

Latest Posts

Don't Miss