Friday, November 22, 2024

Latest Posts

ಕರ್ನಾಟಕ ಟಿವಿ ಸಹಯೋಗದೊಂದಿಗೆ ಬ್ಯಾಟರಾಯನಪುರದಲ್ಲಿ ಅದ್ಧೂರಿ ದಸರಾ ಮಹೋತ್ಸವ..

- Advertisement -

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಫೌಂಡೇಶನ್ ವತಿಯಿಂದ ಶ್ರೀ ತಮ್ಮೇಶ್ ಗೌಡರ ನೇತೃತ್ವದಲ್ಲಿ ಐತಿಹಾಸಿಕ ದಸರಾ ಮಹೋತ್ಸವವು, ಅಕ್ಟೋಬರ್ 9ರಂದು ಅತ್ಯಂತ ಅದ್ಧೂರಿಯಾಗಿ ನಡೆಯಿತು. ಮೊಟ್ಟ ಮೊದಲ ಬಾರಿಗೆ ಇಡೀ ವಿಧಾನಸಭಾ ಕ್ಷೇತ್ರ ಒಟ್ಟಾಗಿ ಸೇರಿ ಈ ಹಬ್ಬವನ್ನು ವೈಭವದಿಂದ ಆಚರಿಸಿದರು.

ಈ ಉದ್ಘಾಟನಾ ಸಮಾರಂಭವು ವಿದ್ಯಾರಣ್ಯಪುರದಲ್ಲಿರುವ NTI ಆಟದ ಮೈದಾನದಲ್ಲಿ ನೆರವೇರಿತು. ಇಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ, ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ವೇದಿಕೆ ಮೇಲೆ ನಿರ್ಮಿಸಿದ್ದ ಆಕರ್ಷಕ ಮಂಟಪದಲ್ಲಿ, ಶ್ರೀ ದುರ್ಗಾಪರಮೇಶ್ವರಿ ದೇವಿಗೆ, ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ ಮಾಡಲಾಯಿತು.

100 ಕೋಟಿ ಡೀಲ್ ಬಗ್ಗೆ ಮಾತಾಡೋಕ್ಕೆ ಮೋದಿಯವರಿಗೆ ತಾಕತ್ ಇದ್ಯಾ..?

ಈ ಸಂದರ್ಭದಲ್ಲಿ ಸುಮಾರು 2 ಸಾವಿರ ಮಹಿಳೆಯರು ಲಲಿತಾ ಸಹಸ್ರನಾಮ ಪಠಣೆ ಮಾಡಿದರು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್‌ಗಳಿಂದ ಹಾಗೂ ಗ್ರಾಮಗಳಿಂದ ಗ್ರಾಮದೇವತೆಗಳ 130 ಪಲ್ಲಕ್ಕಿಗಳು ಆಗಮಿಸಿದ್ದವು. ಎಲ್ಲಾ ಪಲ್ಲಕ್ಕಿಗಳಿಗೂ ಸ್ವಾಗತ ಸಮಿತಿಯ ಸದಸ್ಯರಿಂದ ಮತ್ತು ಕ್ಷೇತ್ರದ ಪ್ರಮುಖರು ಪೂಜೆ ಸಲ್ಲಿಸಿದರು.

ಸುಮಾರು 8 ಸಾವಿರಕ್ಕೂ ಹೆಚ್ಚು ಮಹಿಳೆಯರು ಎಲ್ಲಾ ದೇವರುಗಳಿಗೆ ಮಹಾ ಆರತಿ ಮಾಡುವುದರ ಮೂಲಕ ಬೃಹತ್ ಶೋಬಾಯಾತ್ರೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅವಧೂತ ವಿನಯ್ ಗುರೂಜಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಮತ್ತು ಹೆಸರಾಂತ ಮಾಧ್ಯಮ ವರದಿಗಾರರಾದ ಪ್ರಶಾಂತ್ ನಾತುರವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರು  ಮತ್ತು ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಹೆಚ್. ಶಿವಣ್ಣನವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದಾರುಣ ಸಾವು..

ಉದ್ಘಾಟನೆ ಕಾರ್ಯಕ್ರಮದ ನಂತರ 130 ಪಲ್ಲಕ್ಕಿಗಳು ಮತ್ತು 30ಕ್ಕೂ ಹೆಚ್ಚು ಕಲಾತಂಡಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದವು. ದಾರಿಯುದ್ದಕ್ಕೂ ಕಲಾತಂಡಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರಸ್ತುತ ಪಡಿಸಿದವು. ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.

ಶೋಭಾಯಾತ್ರೆ ಶ್ರೀ ಕೋದಂಡರಾಮ ದೇವಸ್ಥಾನದ ಬಳಿ ಕೊನೆಗೊಂಡಿತು. ಇಲ್ಲಿ ಪಲ್ಲಕ್ಕಿಗಳಿಗೂ ಪೂಜೆ ಸಲ್ಲಿಸಿ, ಆಕರ್ಷಕ ಪಟಾಕಿಗಳನ್ನು ಸಿಡಿಸಿ, ಕಾರ್ಯಕ್ರಮದ ಸಮಾರೋಪ ಮಾಡಲಾಯಿತು. ಇಡೀ ಕ್ಷೇತ್ರವನ್ನು ಕೇಸರಿ ಬಾವುಟಗಳಿಂದ ಮತ್ತು ದೀಪಾಲಂಕಾರಗಳಿಂದ ಶೃಂಗಾರಗೊಳಿಸಲಾಗಿದ್ದು, ಹಬ್ಬದ ವಾತಾವರಣವಿತ್ತು.

ಕಾರ್ಯಕ್ರಮದ ರೂವಾರಿಗಳಾದ ಶ್ರೀ. ಹೆಚ್.ಸಿ.ತಮ್ಮೇಶ್ ಗೌಡರು ಮಾತನಾಡಿ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಮಸ್ತ ನಾಗರಿಕರಿಗೆ ಒಳ್ಳೆಯದಾಗಲಿ, ಎಂಬ ಸಂಕಲ್ಪದೊಂದಿಗೆ ಈ ಉತ್ಸವವನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ರಮದಿಂದ ಬ್ಯಾಟರಾಯನಪುರಕ್ಕೆ ಹೆಚ್ಚು ಗೌರವ ಸಿಗಲಿ. ಮತ್ತು ಇಡೀ ರಾಜ್ಯವು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಗುರುತಿಸುವಂತಾಗಲಿ ಎಂದು ಹೇಳಿದರು.

‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಸುದೀಪ್..

ಕಳೆದ 2 ವರ್ಷದಿಂದ ಕೇಸರಿ ಫೌಂಡೇಶನ್ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನರಿಗಾಗಿ ಬಹಳಷ್ಟು ಸಾಮಾಜಿಕ ಸೇವೆ ಮಾಡುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ನನ್ನ ಮೇಲೆ ಮತ್ತು ಕೇಸರಿ ಫೌಂಡೇಶನ್ ಮೇಲೆ ಜನರು ತೋರಿಸುತ್ತಿರುವ ಪ್ರೀತಿಗೆ ನಾವು ಸದಾ ಚಿರಋಣಿಯಾಗಿರುತ್ತೇವೆ.

ನಾವು ಯಾವುದಾದರೂ ಕಾರ್ಯಕ್ರಮವನ್ನು ಆಯೋಜಿಸಿದರೆ, ಸಾವಿರಾರು ಮಹಿಳೆಯರು, ಯುವಕರು ಸ್ವಯಂಸೇವಕರಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ನಮ್ಮ ಪ್ರತೀ ಕಾರ್ಯಕ್ರಮಕ್ಕೂ ಸಹಸ್ರಾರು ಜನರು ಸ್ವಯಂಪ್ರೇರಿತರಾಗಿ ಬಂದು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನರ ಒಳಿತಿಗಾಗಿ ಈ ಎಲ್ಲಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಒಂದು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲು ಹೊರಟಿದ್ದೇನೆ. ಅದಕ್ಕೆ ಕ್ಷೇತ್ರದ ಎಲ್ಲಾ ನಾಗರಿಕರ ಅಖಂಡ ಬೆಂಬಲ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇವೆಂದು ಹೇಳಿದರು. ಇದೇ ಸಂದರ್ಭದಲ್ಲಿ ಕೇಸರಿ ಫೌಂಡೇಶನ್ ಸದಸ್ಯರಿಗೆ, ರಾತ್ರಿ ಹಗಲು ದುಡಿದ ಸ್ವಯಂಸೇವಕರಿಗೆ, ಎಲ್ಲಾ ನಾಗರಿಕರಿಗೂ ಧನ್ಯವಾದ ತಿಳಿಸಿದರು.

- Advertisement -

Latest Posts

Don't Miss