Dasara Special: ನವರಾತ್ರಿಯಲ್ಲಿ ಮಾಡುವ ಗುಜರಾತಿನ ಗರ್ಭಾ ನೃತ್ಯದ ಹಿಂದಿರುವ ಸತ್ಯವೇನು ಗೊತ್ತಾ..?

Dasara Special: ನವರಾತ್ರಿ, ದಸರಾ ಹಬ್ಬವನ್ನು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ರೀತಿಯಿಂದ ಆಚರಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಮೈಸೂರು ದಸರಾ ಇರುವಂತೆ, ತಮಿಳುನಾಡಿನಲ್ಲೂ ಗೊಂಬೆ ಕೂರಿಸಿ ಹಬ್ಬ ಆಚರಿಸುತ್ತಾರೆ. ಕೇರಳದಲ್ಲಿ ವಿದ್ಯಾರಂಭದ ಹಬ್ಬ ಅಂತಾ ಕರಿಯುತ್ತಾರೆ. ಆಂಧ್ರ, ತೆಲಂಗಾಣದಲ್ಲೂ ಹೂವಿನ ಅಟ್ಟಿ ಮಾಡಿ, ದೇವಿಯನ್ನು ಪೂಜಿಸುತ್ತಾರೆ.

ಇನ್ನು ಬೆಂಗಾಲದಲ್ಲೂ ದುರ್ಗಾಪೂಜೆ ನಡೆಯುತ್ತದೆ. ಅದೇ ರೀತಿ, ಗುಜರಾತ್‌ನಲ್ಲೂ ನವರಾತ್ರಿಗೆ ದುರ್ಗೆಯ ಆರಾಧನೆ ಮಾಡಿ, ಆಕೆಗಾಗಿ ನೃತ್‌ಯವನ್ನು ಅರ್ಪಿಸುತ್ತಾರೆ. ಹೀಗೆ ದೇವಿಗೆ ಅರ್ಪಿಸುವ ನೃತ್ಯವೇ ಗರ್ಭಾ.  ಹಾಗಾದ್ರೆ ಗರ್ಭಾ ಅಂದ್ರೆ ಏನು..? ಇದರ ಅರ್ಥವೇನು ಅಂತಾ ತಿಳಿಯೋಣ ಬನ್ನಿ.

ಹೆಸರೇ ಹೇಳುವಂತೆ ಗರ್ಭಾ ಅಂದ್ರೆ ಗರ್ಭ. ತಾಯಿಯ ಗರ್ಭ. ಗರ್ಭಾ ಆಡುವುದಕ್ಕೂ ಮುನ್ನ ಕಲಶವನ್ನಿರಿಸುತ್ತಾರೆ. ಆ ಕಲಶದಲ್ಲಿ ದೀಪವಿಡುತ್ತಾರೆ.. ಕಲಶ ಅಂದ್ರೆ ಗರ್ಭದ ಸಂಕೇತ. ದೀಪವೆಂದರೆ ಶಕ್ತಿಯ ಸಂಕೇತ.

ಬಳಿಕ ದೇವಿಯನ್ನು ಪೂಜೆ ಮಾಡಿ, ಗರ್ಭಾ ನೃತ್ಯವನ್ನು ದೇವಿಗೆ ಅರ್ಪಿಸುತ್ತಾರೆ. ಹೀಗೆ ನೃತ್ಯ ಮಾಡುವಾಗ ವೃತ್ತಾಕಾರದಲ್ಲಿ ನಿಲ್ಲಲಾಗುತ್ತದೆ. ಅಂದ್ರೆ ಜನನ ಮರಣ ಮತ್ತು ಮರುಜನನ. ಈ ಸರ್ಕಲ್‌ನ್ನು ಗರ್ಭಾ ನೃತ್ಯ ಸಂಕೇತಿಸುತ್ತದೆ. ಹೀಗೆ ವೃತ್ತಾಕಾರದಲ್ಲಿ ತಿರುಗಿ ತಿರುಗಿ ನೃತ್ಯ ಮಾಡಲಾಗುತ್ತದೆ.

About The Author