Dasara Special: ಇಡೀ ಭಾರತ ದೇಶದಲ್ಲಿ ನವರಾತ್ರಿಯನ್ನು ತಾಯಿ ದುರ್ಗೆಯ ಪೂಜೆ ಮಾಡುತ್ತ ಆಚರಿಸುತ್ತಾರೆ. ಆದರೆ ಬಂಗಾಲದಲ್ಲಿ ಮಾತ್ರ ದುರ್ಗೆಯನ್ನು ಮಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾದ್ರೆ ಇಲ್ಲಿನ ದುರ್ಗಾಪೂಜೆಯ ವಿಶೇಷತೆಯ ಬಗ್ಗೆ ತಿಳಿಯೋಣ ಬನ್ನಿ.
ಬಂಗಾಳದಲ್ಲಿ ದುರ್ಗಾದೇವಿಯನ್ನು ಮಗಳಾಗಿ ಪೂಜಿಸಲಾಗುತ್ತದೆ. ಮಹಾದೇವನ್ನು ಮದುವೆಯಾಗಿ ಪ್ರಥಮ ಹಬ್ಬವಾದ ದಸರಾ ಹಬ್ಬಕ್ಕೆ ಉಮಾ ದೇವಿ ತವರಿಗೆ ಬರುತ್ತಾಳೆ ಅಂತಲೇ ಇಲ್ಲಿನ ಜನ ನಂಬುತ್ತಾರೆ. ಹೀಗೆ ಬರುವ ಉಮಾ ದೇವಿಯ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕ“ಳ್ಳುತ್ತಾರೆ.
ಮನೆ ಮನೆಯಲ್ಲೂ ದುರ್ಗೆಗೆ ವಿಶೇಷ ಪೂಜೆ ಮಾಡುತ್ತಾರೆ. ವಿವಿಧ ಬಗೆಯ ಸಿಹಿ ತಿಂಡಿಯ ಜತೆಗೆ ಮಾಂಸಾಹಾರವನ್ನು ಕೂಡ ನೈವೇದ್ಯವನ್ನಾಗಿ ಅರ್ಪಿಸುತ್ತಾರೆ. ಅಲ್ಲದೇ ಸಾರ್ವಜನಿಕವಾಗಿ ಬೀದಿ ಬೀದಿಗಳಲ್ಲಿ ದುರ್ಗಾ ಪೆಂಡಾಲ್ ಹಾಕಲಾಗುತ್ತದೆ. ಅಲ್ಲಿ ಬೃಹತ್ ದುರ್ಗೆಯ ಮೂರ್ತಿ ತಯಾರಿಸಿ, ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಬಳಿಕ ದಸರಾ ಮಹೋತ್ಸದ ದಿನ, ಮೆರವಣಿಗೆಯ ಮೂಲಕ ದುರ್ಗೆಯನ್ನು ವಿಸರ್ಜಿಸಲಾಗುತ್ತದೆ. ಈ ವೇಳೆ ಮಗಳು ಮತ್ತೆ ಗಂಡನ ಮನೆಗೆ ಹೋಗುತ್ತಾಳೆ ಎನ್ನುವ ಬೇಸರದಲ್ಲಿ ಇಲ್ಲಿನ ಹಲವರು ನಿಜವಾಗಿಯೂ ಕಣ್ಣೀರು ಹಾಕುತ್ತಾರೆ.
ಹಾಗಾಗಿ ಬಂಗಾಲದಲ್ಲಿ ದುರ್ಗಾಪೂಜೆ ಅಂದ್ರೆ ಅತ್ಯಂತ ವಿಶೇಷ ಪೂಜೆ. ಇನ್ನು ದುರ್ಗಾದೇವಿ ಮಹಿಷಾಸುರನ ಮರ್ದನ ಮಾಡುವಂತೆ ಇಲ್ಲಿ ಮೂರ್ತಿ ನಿರ್ಮಿಸಲಾಗುತ್ತದೆ. ಹಾಗೆ ಮೂರ್ತಿ ನಿರ್ಮಿಸುವಾಗ, 1 ಮಣ್ಣಿನ ಬಳಕೆ ಮಾಡಲಾಗುತ್ತದೆ. ಆ ಮಣ್ಣನ್ನು 1 ಜಾಗದಿಂದ, ಪದ್ಧತಿ ಪ್ರಕಾರವಾಗಿ ತರಲಾಗುತ್ತದೆ. ಆ ಜಾಗ ಯಾವುದು ಅಂತಾ ಹೇಳಿದ್ರೆ ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ಬಂಗಾಲದ ದುರ್ಗಾಪೂಜೆಗೆ ದುರ್ಗಾ ಮೂರ್ತಿ ನಿರ್ಮಾಣವಾಗುವ ಪದ್ಧತಿ.
ವೇಶ್ಯಾವಾಟಿಕೆ ನಡೆಯುವ ಜಾಗದಿಂದ ಮಣ್ಣನ್ನು ತಂದು ದುರ್ಗಾದೇವಿಯ ಪ್ರತಿಮೆ ನಿರ್ಮಾಣ ಮಾಡುವ ಮಣ್ಣಿಗೆ ಸೇರಿಸುವವರೆಗೂ ಆ ಮೂರ್ತಿ ಪವಿತ್ರವಾಗುವುದಿಲ್ಲ ಅಂತಲೇ ಇಲ್ಲಿನ ಜನ ನಂಬುತ್ತಾರೆ. ವೇಶ್ಯಾವಾಟಿಕೆ ಮಾಡುವ ಮನೆಯ ಎದುರಿನ ಮಣ್ಣನ್ನು ತಂದು, ಮಣ್ಣಿಗೆ ಸೇರಿಸಿ, ಮೂರ್ತಿ ಮಾಡಿದಾಗಲೇ, ಅದು ಪವಿತ್ರ ದುರ್ಗೆಯ ಮೂರ್ತಿ ಎಂದು ಹೇಳಲಾಗುತ್ತದೆ.
ಈ ಮಣ್ಣು ತರುವವರು ವೇಶ್ಯಾವಾಟಿಕೆ ಮಾಡುವ ಜಾಗಕ್ಕೆ ಹೋಗಲು 1 ದಿನ ಮತ್ತು 1 ಸಮಯ ನಿಗದಿ ಮಾಡುತ್ತಾರೆ. ಅಲ್ಲಿ ಹೋಗಿ ವೇಶ್ಯೆಯ ಬಳಿ ಮಣ್ಣು ನೀಡು ಎಂದು ಭಿಕ್ಷೆ ಬೇಡುತ್ತಾರೆ. ಆಕೆ ಆಕೆಯ ಮನಯ ಬಳಿಯ ಮಣ್ಣನ್ನು ಭಿಕ್ಷೆಯಾಗಿ ವ್ಯಕ್ತಿಗೆ ನೀಡುತ್ತಾಳೆ. ಮತ್ತು ಆ ವ್ಯಕ್ತಿ ಆ ಮಣ್ಣನ್ನು ತಂದು ದುರ್ಗಾಮೂರ್ಿ ಮಾಡುವವನಿಗೆ ನೀಡುತ್ತಾನೆ.
ಯಾಕೆ ಈ ಪದ್ಧತಿ ಅಂತಾ ಹೇಳೋದಾದ್ರೆ, ಜನ ತಮ್ಮ ಪುಣ್ಯಗಳನ್ನ, ಸದ್ಬುದ್ಧಿ, ಸದ್ಗುಣಗಳನ್ನೆಲ್ಲ ಆ ಜಾಗದಲ್ಲಿ ಬಿಟ್ಟು ವೇಶ್ಯೆಯ ಬಳಿ ಹೋಗುತ್ತಾರೆ. ಹಾಗಾಗಿ ಆ ಮಣ್ಣು ಪವಿತ್ರ ಎನ್ನಲಾಗುತ್ತದೆ. ಅಲ್ಲದೇ, ದೇವಿಯ ಮುಂದೆ ಸಾಮಾನ್ಯರು, ವೇಶ್ಯೆಯರು ಎಲ್ಲರೂ ಸಮ ಎಂದು ಸಂದೇಶ ನೀಡಲು ಈ ಪದ್ಧತಿಯನ್ನು ಬಂಗಾಲದಲ್ಲಿ ಅನುಸರಿಸಲಾಗುತ್ತದೆ.




