Friday, December 5, 2025

Latest Posts

ಅಭಿವೃದ್ಧಿ ಮಾಡಿಲ್ಲವೆಂದ ಆರ್.ಅಶೋಕ್‌ಗೆ ತಿರುಗೇಟು ನೀಡಿದ ದಾಸರಳ್ಳಿ ಮಂಜುನಾಥ್

- Advertisement -

Political News: ಸದನದಲ್ಲಿಂದು ಕಾಂಗ್ರೆಸ್- ಬಿಜೆಪಿ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯೇ ಮಾಡಿಲ್ಲವೆಂದು ಬಿಜೆಪಿಗರು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ದಾಸರಳ್ಳಿ ಮಾಜಿ ಎಂಎಲ್‌ಎ ಮಂಜುನಾಥ್, ನಾನು ಶಾಸಕನಾಗಿದ್ದಾಗ, ಕುಮಾರಸ್ವಾಮಿಯವರು ಕೊಟ್ಟಿದ್ದ 600 ಕೋಟಿ ರೂಪಾಯಿಯನ್ನು ನಿಮ್ಮ ಸರ್ಕಾರದವರು ಮೂರೇ ದಿನಕ್ಕೆ ಮುಗಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನನ್ನ ಕ್ಷೇತ್ರಕ್ಕೆ ಬಂದಿದ್ದ ಅನುದಾನವನ್ನು ನೀವು ನಿಮ್ಮ ತೋಟದ ರಾಜಕಾಲುವೆಗೆ ಬಳಸಿಕೊಂಡ್ರಿ. ಇದಕ್ಕೆ ನನ್ನ ಬಳಿ ದಾಖಲೆಯೂ ಇದೆ. ನಾನು ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ಅಲ್ಲದೇ, ಸಿಎಂ, ಡಿಸಿಎಂ ಗಮನಕ್ಕೆ ಈ ವಿಚಾರ ತರುತ್ತೇನೆ ಎಂದಿದ್ದಾರೆ. ಅಲ್ಲದೇ, ಹಲವು ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ. ನೀವು ಅನುದಾನವೇ ನೀಡುತ್ತಿಲ್ಲವೆನ್ನುತ್ತಿದ್ದೀರಲ್ಲಾ, ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss