Chikkamagaluru News: ಇಂದು ದತ್ತಜಯಂತಿ ಇರುವ ಕಾರಣಕ್ಕೆ, ಚಿಕ್ಕಮಗಳೂರಿನಲ್ಲಿ ದತ್ತಮಾಲಾಧಾರಿಗಳು, ಮೆರವಣಿಗೆ ನಡೆಸಿದರು. ದತ್ತ ಬಾಬಾ ಬುಡ್ನ್‌ಗಿರಿಯಲ್ಲಿರುವ ದತ್ತಪಾದುಕೆ ದರ್ಶನಕ್ಕಾಗಿ, ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಹಲವು ಭಾಗಗಳಿಂದ ಬಂದ ಮಾಲಾಧಾರಿಗಳು, ದತ್ತಪಾದುಕೆ ದರ್ಶನ ಮಾಡಿದರು. ಮಾಜಿ ಸಚಿವರಾದ ಸಿ.ಟಿ.ರವಿ ಕೂಡ ದತ್ತಪಾದುಕೆ ದರ್ಶನ ಮಾಡಿದರು.
ದತ್ತಪೀಠದಲ್ಲಿ, ದತ್ತ ಗುಹೆ ಮುಂಭಾಗದ ತುಳಸಿ ಕಟ್ಟೆಯ ಬಳಿ, ಹೋಮ ಹವನಗಳನ್ನು ನಡೆಸಲಾಯಿತು. ಇನ್ನು ದತ್ತಜಯಂತಿ ಪ್ರಯುಕ್ತ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಚಿಕ್ಕಮಗಳೂರಿನ ಹಲವೆಡೆ ಮುಂಜಾಗೃತಾ ಕ್ರಮ ವಹಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನು ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಎಲ್ಲ ಅಂಗಡಿ, ಮುಂಗಟ್ಟಿಗಳನ್ನು ಮುಚ್ಚಲಾಗಿದೆ.
ಹಿಂದೂ ಸಮುಧಾಯದ ಸಮಸ್ತರಿಗೂ ತ್ರಿಮೂರ್ತಿಗಳ ಸ್ವರೂಪವಾದ ಋಷಿ ಅತ್ರಿ ಮತ್ತು ಮಾತೆ ಅನಸೂಯಾ ದೇವಿಯ ಸುತ ಶ್ರೀ ಗುರು ದತ್ತಾತ್ರೇಯರ ಜನ್ಮ ಜಯಂತಿಯ ಶುಭಾಶಯಗಳು.
ದತ್ತ ಜಯಂತಿಯ ಪ್ರಯುಕ್ತ ಇಂದು ದತ್ತ ಪೀಠಕ್ಕೆ ಬಂದಿದ್ದೇನೆ. ಭಕ್ತಿಯಿಂದ ಗುರು ದೇವರಿಗೆ ಪೂಜೆ, ಸೇವೆ ಸಲ್ಲಿಸುತ್ತಿದ್ದೇನೆ. ಸಮಸ್ತ ಹಿಂದೂ ಕುಲದ ಮೇಲೆ ಗುರು ದತ್ತಾತ್ರೇಯರ… pic.twitter.com/KFRUW7iPnr
— C T Ravi 🇮🇳 ಸಿ ಟಿ ರವಿ (@CTRavi_BJP) December 26, 2023
‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’