Mangaluru News: ಪತಿ ವಿದೇಶದಲ್ಲಿದ್ದು, ಅತ್ತೆ ಮಾವನೊಂದಿಗೆ ಮನೆಯಲ್ಲಿದ್ದ ಸೊಸೆ, ಮಾವನ ಮೇಲೆ ಸ್ಟಿಕ್‌ನಿಂದ ಹಲ್ಲೆ ಮಾಡಿದ್ದಾಳೆ. ಈ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಗಳೂರಿನ ಕುಲಶೇಖರದಲ್ಲಿ ಈ ಘಟನೆ ನಡೆದಿದ್ದು, ಉಮಾಶಂಕರಿ ಎಂಬಾಕೆ ಈ ರೀತಿ ನೀಚಳಂತೆ, ತನ್ನ ಮಾವ ಪದ್ಮನಾಭ ಸುವರ್ಣ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾಳೆ. ಈಕೆಯ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದು, ಈಕೆ ಅತ್ತೆ ಮಾವನೊಂದಿಗೆ ಮಂಗಳೂರಿನಲ್ಲಿದ್ದಳು. ಮನೆಯಲ್ಲಿ ಸಿಸಿಟಿವಿ ಹಾಕಿಸಿದ್ದು, ಅದರ ಕನೆಕ್ಷನ್ ಪತಿಯ ಮೊಬೈಲ್‌ನಲ್ಲಿತ್ತು. ಹಾಗಾಗಿ ಮನೆಯಲ್ಲಿ ಏನೇ ಘಟನೆ ನಡೆದರೂ, ಪತಿಗೆ ಗೊತ್ತಾಗುತ್ತಿತ್ತು.
ತಂದೆಯ ಮೇಲೆ ಈ ರೀತಿಯಾಗಿ ಪತ್ನಿ ಹಲ್ಲೆ ಮಾಡಿರುವ ದೃಶ್ಯದಿಂದ, ಉಮಾಶಂಕರಿ ಪತಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಮಾರ್ಚ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಉಮಾಶಂಕರಿ ಯಾವುದೇ ಅವಿದ್ಯಾವಂತೆ ಅಲ್ಲ., ಬದಲಾಗಿ ವಿದ್ಯಾವಂತೆಯಾಗಿದ್ದು, ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಮನಸ್ಸು ಮಾಡಿದ್ರೆ, ಆಕೆ ಅತ್ತೆ ಮಾವನ ಬಳಿ ಕೆಲಸದಾಕೆಯನ್ನು ಇರಿಸಿ, ಅವರ ಆರೈಕೆ ಮಾಡಬಹುದಿತ್ತು. ಆದರೆ ಈ ರೀತಿಯಾಗಿ ಹಿಂಸಿಸಿದ್ದಾಳೆ.
ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಮಾಶಂಕರಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಪದ್ಮನಾಭ ಸುವರ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ
ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ