Saturday, January 18, 2025

Latest Posts

ಶತ್ರು ಸಂಹಾರಿಣಿ ಪ್ರತ್ಯಂಗೀರಾ ದೇವಿ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Political News: ತಮಿಳುನಾಡಿನ ಕುಂಭಕೋಣಂನ ಅಯ್ಯಾವುಡಿಯಲ್ಲಿರುವ ಪ್ರತ್ಯಂಗೀರಾ ದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ, ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ.

ರಾಜಕೀಯದಲ್ಲಿ ಬರುತ್ತಿರುವ ಕೆಲ ಅಡೆತಡೆಗಳನ್ನು ನಿವಾರಿಸಲು ಡಿಸಿಎಂ ದೇವಿ ದರ್ಶನ ಮಾಡಿದ್ದಾರೆನ್ನಲಾಗಿದೆ. ಈ ದೇವಿ ಪೂಜೆ ಸಲ್ಲಿಸಿದರೆ, ಶತ್ರುಗಳನ್ನು ದೂರವಿಡುತ್ತಾಳೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಶತ್ರುಗಳ ನಾಶಕ್ಕಾಗಿ, ಶತ್ರುಗಳನ್ನು ಸೋಲಿಸುವುದಕ್ಕಾಗಿ, ಪ್ರತ್ಯಂಗೀರಾ ಹೋಮ ಮಾಡಲಾಗುತ್ತದೆ.

ಅಲ್ಲದೇ ಯಾವ ಸ್ಥಳದಲ್ಲಿ ಈ ಹೋಮ ಮಾಡಲಾಗುತ್ತದೆಯೋ, ಆ ಸ್ಥಳದಲ್ಲಿ ನಕಾರಾತ್ಮಕತೆ ಇರುವುದಿಲ್ಲ. ಮತ್ತು ಆ ಮನೆಯಲ್ಲಿ ಇರುವವರಿಗೆ ಸದಾ ಗೆಲುವು, ಯಶಸ್ಸು ಸಿಗುತ್ತದೆ ಅನ್ನೋ ನಂಬಿಕೆ ಇದೆ.

- Advertisement -

Latest Posts

Don't Miss