Belagavi Political News: ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾನು ಇಲ್ಲಿ ಸನ್ಮಾನ ಮಾಡಿಸಿಕೊಳ್ಳಲು ಬಂದಿಲ್ಲ. ಅಧಿಕಾರಕ್ಕೆ ತಂದ ನಿಮಗೆ ಸನ್ಮಾನ ಮಾಡಲು ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ನೀವೆಲ್ಲ ಸೇರಿ ಎಂ.ಬಿ.ಪಾಟೀಲ್ ಅವರನ್ನು ಗೆಲ್ಲಿಸುವ ವಿಶ್ವಾಸ ಇತ್ತು . ಸೋತಿದ್ದು ವಿಸ್ಮಯ. ಕಾರ್ಯಕರ್ತರನ್ನು ಭೇಟಿಯಾಗಲು ಇಲ್ಲಿ ಬಂದಿದ್ದೆನೆ ಎಂದಿದ್ದಾರೆ.
ಇಡೀ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭ್ರಷ್ಟ ಬಿಜೆಪಿ ಅಧಿಕಾರದಿಂದ ಇಳಿಸಿದ್ದೀರಿ. ಹಾಗಾಗಿ ನಾವು ಅಧಿಕಾರದಲ್ಲಿದ್ದು, ನಿಮ್ಮ ಸೇವೆ ಮಾಡುತ್ತಿದ್ದೇವೆ. ಬೆಳಗಾವಿಯಿಂದಲೇ ಪ್ರಜಾಧ್ವನಿ ಮೂಲಕ ಚಿಕ್ಕೋಡಿ ಮೂಲಕ ಇಡೀ ರಾಜ್ಯ ಪ್ರವಾಸ ಮಾಡಿ ಅಧಿಕಾರಕ್ಕೆ ಬಂದಿದೆ. ನಿಮ್ಮ ಶ್ರಮ ಒಗ್ಗಟ್ಟು ಕಾಂಗ್ರೆಸ್‌ಗೆ ಅಧಿಕಾರ ತಂದು ಕೊಟ್ಟಿದೆ. ನೀವು ಗೆಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಪರವಾಗಿ ನಾನಿದ್ದೇನೆ ಎಂದು ಡಿಕೆಶಿ ಅಭಯ ನೀಡಿದ್ದಾರೆ.
ನಾವು ನುಡಿದಂತೆ ನಡೆದಿದ್ದೇವೆ. ನಾವು 5 ಗ್ಯಾರಂಟಿ ಕೊಟ್ಟು, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಕೇಂದ್ರದವರು ಅಕ್ಕಿ ಕೊಡದ್ದಕ್ಕೆ ಅಕ್ಕಿ ಬದಲಿಗೆ ದುಡ್ಡು ಕೊಡ್ತಿದ್ದೀವಿ. ತಾಯಂದಿರಿಗೆ ಗೃಹಲಕ್ಷ್ಮೀ ಬರ್ತಾಯಿದೆ ತಾನೆ ..? ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇದು ಇತ್ತಾ ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಪಾಪ ಬಿಜೆಪಿ ಹಾಗೂ ದಳದವರು ಸೋತು ಬಿಟ್ಟು, ಬೇಕಾದಷ್ಟು ಪ್ರಯತ್ನ ಮಾಡ್ತಿದ್ದಾರೆ. ರೈತನಿಗೆ ಸಹಾಯ ಮಾಡಲು ಸೂಕ್ತ ನೀರಿನ ವ್ಯವಸ್ಥೆ ಮಾಡಲಾಗುವುದು, ನೀರಾವರಿಗಾಗಿ ನಾನು ಕೆಲವು ಜಾಗ ಪರಿಶೀಲಿಸಿದ್ದು, ಮನದಲ್ಲಿ ಇಟ್ಟುಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುವೆ. ಕೆಲವು ನಮ್ಮ ತಪ್ಪುಗಳಿಂದ ಎರಡು ಮೂರು ಸೀಟು ವ್ಯತ್ಯಾಸವಾಗಿವೆ. ಮುಂದೆ ಕಾರ್ಯಕರ್ತರಿಗೆ ಹೆಚ್ಚು ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ರೈತರಲ್ಲಿ ಬದಲಾವಣೆ ತರುವ ಕೆಲಸ ಮಾಡುವೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಕಾರ್ಯಕ್ರಮ ಮುಗಿದ ಬಳಿಕ, ಮಾಧ್ಯದವರ ಪ್ರಶ್ನೆಗೆ ಗರಂ ಆದ ಡಿಕೆಶಿ, ಯಾರೋ ಎಂಎಲ್‌ಎ ಬಂದಿಲ್ಲವೆಂದು ತರ್ಲೆ ಪ್ರಶ್ನೆ ಕೇಳ್ತಿದ್ದೀಯಾ ಎಂದು ರೇಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬೆಳಗಾವಿಯ ಭಾಗದ ಶಾಸಕರ ಗೈರಾಗಿದ್ದರು. ಹಾಗಾಗಿ ಎಂಎಲ್‌ಎ ಬರದ ಬಗ್ಗೆ, ಮಾಧ್ಯಮದವರು ಪ್ರಶ್ನಿಸಿದ್ದಾರೆ. ಹಾಗಾಗಿ ಯಾರೋ ಎಂಎಲ್‌ಎ ಬಂದಿಲ್ಲವೆಂದು ತರ್ಲೆ ಪ್ರಶ್ನೆ ಕೇಳ್ತಿದ್ದೀಯಾ ಎಂದು ರೇಗಿದ್ದಾರೆ.
ಸಚಿವರಾದ ಸತೀಶ್ ಜಾರಕಿಹೊಳು, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಬೆಳಗಾವಿ ಜಿಲ್ಲೆಯ 11 ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್‌ಸಿಗಳು ಸಮಾವೇಶಕ್ಕೆ ಗೈರಾಗಿದ್ದರು. ಕಾರ್ಯಕ್ರಮಕ್ಕೆ ಸಚಿವದ್ವರು, ಜಿಲ್ಲೆಯ ಎಲ್ಲ ಶಾಸಕರಿಗೂ ಆಹ್ವಾನಿಸಲಾಗಿತ್ತು. ಆದರೂ ಕೂಡ ಅವರು ಬಂದಿರಲಿಲ್ಲ.