Sunday, December 22, 2024

Latest Posts

‘ಅಷ್ಟಕ್ಕೂ ಕೇಂದ್ರವು ಅಕ್ಕಿಯನ್ನು ಪುಗಸಟ್ಟೆ ನೀಡುತ್ತಿಲ್ಲ’

- Advertisement -

Political News: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಮನೆಯ ಸದಸ್ಯನಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ ಇದೀಗ, ಕೇಂದ್ರ ಸರ್ಕಾರ ಬರೀ 5 ಕೆಜಿ ಅಕ್ಕಿ ಕೊಡುತ್ತಿದೆ. ಉಳಿದಿದ್ದನ್ನ ತಡೆ ಹಿಡಿದಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ನಾವು ಘೋಷಿಸಿದ್ದ ಅನ್ನಭಾಗ್ಯ ಯೋಜನೆಯನ್ನು ತಡೆ ಹಿಡಿಯಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದು ಖಂಡನೀಯ. ಈ ಸಂಬಂಧ ಶೀಘ್ರದಲ್ಲೇ ನಾವು ಹೋರಾಟವನ್ನು ಆರಂಭಿಸುತ್ತೇವೆ. ಅಷ್ಟಕ್ಕೂ ಕೇಂದ್ರವು ಅಕ್ಕಿಯನ್ನು ಪುಗಸಟ್ಟೆ ನೀಡುತ್ತಿಲ್ಲ. ನಮಗೆ ಅಕ್ಕಿ ಕೊಡಬಾರದು ಎನ್ನುವ ಒಂದೇ ಕಾರಣಕ್ಕೆ ಎಲ್ಲ ರಾಜ್ಯಗಳಿಗೂ ನೀಡುವ ಅಕ್ಕಿಯನ್ನು ತಡೆ ಹಿಡಿಯಲಾಗಿದೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತರಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು ಛತ್ತೀಸ್‌ಘಢ, ತೆಲಂಗಾಣ ಮೊದಲಾದ ರಾಜ್ಯಗಳ ಬಳಿ ಪ್ರಸ್ತಾವನೆ ಇಟ್ಟಿದ್ದೇವೆ. ಆದಷ್ಟು ಬೇಗನೆ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

“ಡೇರ್ ಡೆವಿಲ್ ಮುಸ್ತಫಾ” ಸಿನಿಮಾಗೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಆದೇಶ

ನಾಳೆ ಮಂಡ್ಯ ಜನತೆಗೆ ಬೀಗರ ಊಟದ ಔತಣಕ್ಕೆ ಆಮಂತ್ರಿಸಿದ ಸುಮಲತಾ ಅಂಬರೀಷ್..

ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

- Advertisement -

Latest Posts

Don't Miss