Sunday, September 8, 2024

Latest Posts

‘ಡಿಸಿಎಂ ಡಿ.ಕೆ.ಶಿವಕುಮಾರ್, ಚೆಲುವರಾಯಸ್ವಾಮಿ, ರಾಜೀನಾಮೆ ಕೊಡಬೇಕು’

- Advertisement -

Political News: ಬೆಂಗಳೂರು: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ಅಶ್ವತ್ಥ ನಾರಾಯಣ್,  ಚಲುವನಾರಾಯಣಸ್ವಾಮಿ ಮತ್ತು ಡಿಕೆಶಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಚಲುವರಾಯಸ್ವಾಮಿ ಅವ್ರ  ಮೇಲೆ ರಾಜ್ಯಪಾಲರರಿಗೆ ದೂರು ಕೊಟ್ಟಿದ್ದಾರೆ.. ಈ ಬಗ್ಗೆ ರಾಜ್ಯಪಾಲರು ಕೂಡ  ವಿಚಾರಿಸಿ ಎಂದು ಸೂಚನೆ ಕೊಟ್ಟಿದ್ದಾರೆ.. ಇಲ್ಲಿ ಪೇ ಸಿಎಂ.. ಪೇ ಡಿಸಿಎಂ, ಪೇ ಚೆಲುವರಾಯಸ್ವಾಮಿ ಅಂತಾ ಇದಾವೆ.. ಎಲ್ಲದಕ್ಕೂ ಪೇ..ಪೇ..ಪೇ… ಅನ್ನೋದೇ ಇದೆ ಇವರಲ್ಲಿ.. ಸಿಎಂ ತನಿಖೆಗೂ ಮುನ್ನ ಫೇಕ್. ಫೇಕ್ ಅಂತಾ ಹೇಳ್ತಾರೆ. ಡಿಸಿಎಂ ಡಿಕೆಶಿವಕುಮಾರ್, ಚೆಲುವರಾಯಸ್ವಾಮಿ, ರಾಜೀನಾಮೆ ಕೊಡಬೇಕು ಎಂದು ಅಶ್ವತ್ಥ್ ನಾರಾಯಣ್ ಆಗ್ರಹಿಸಿದ್ದಾರೆ.

ರೈತ ವಿರೋಧಿ ಸರ್ಕಾರ ನಿಮ್ಮದು. ಬೆಂಗಳೂರು ವಿರೋಧಿ ಸರ್ಕಾರ ನಿಮ್ಮದು. ಬೆಂಗಳೂರು ಜನ ವೋಟ್ ಕೊಟ್ಟಿಲ್ಲ ಅಂತಾ ವಿರೋಧ ನಿಮ್ಮದು. ಅಧಿಕಾರಿಗಳನ್ನೇ ಕಲೆಕ್ಷನ್ ಏಜೆಂಟ್ ಆಗಿ ಮಾಡಿಕೊಳ್ತಿದಾರೆ . ತಕ್ಷಣ ಸಚಿವರನ್ನ ವಜಾ ಮಾಡಬೇಕು. ಡಿಸಿಎಂ ಶಿವಕುಮಾರ್ ಅವರನ್ನ ವಜಾ ಮಾಡಬೇಕು. ಲೋಕಾಯುಕ್ತ ತನಿಖೆಗೆ ಕೊಡಬೇಕು. ಕೆಂಪೇಗೌಡರು ನಾಡು ಕಟ್ಟಿದ್ರು, ಇವರು ನಾಡು ಒಡಿತಿದಾರೆ ಎಂದು ಅಶ್ವತ್ಥ್ ನಾರಾಯಣ ಆರೋಪಿಸಿದ್ದಾರೆ.

ಡಿಕೆಶಿಯವರು ಇನ್ಮೆಲೆ ಕೆಂಪೇಗೌಡರ ಹೆಸರನ್ನ ಹೇಳಬೇಡಿ. ನ್ಯಾಯ ನೀತಿ ಧರ್ಮದ ಕಾಳಜಿ ಇಲ್ಲದ ರಾಜ್ಯ ಸರ್ಕಾರ. ಡಿಸಿಎಂ ಹೊರಗಿನವರು, ಬೆಂಗಳೂರಿಗೆ ಇಂಪೋರ್ಟ್ ಮಿನಿಸ್ಟರ್ ನ ಕೊಟ್ಟಿದ್ದಾರೆ. ದಯವಿಟ್ಟು ಎಕ್ಸ್ ಪೋರ್ಟ್ ಮಾಡಿಬಿಡಿ ಎಂದು ಅಶ್ವತ್ಥ್ ಹೇಳಿದ್ದಾರೆ. ಈ ಎರಡು ಕೇಸನ್ನು ಲೋಕಯುಕ್ತಕ್ಕೆ ತನಿಖೆ ಮಾಡಬೇಕು. ಡಿಸಿಎಂ ಆಗಿರುವಂತವರಾದ, ಬೆಂಗಳೂರು ನಗರಾಭಿವೃದ್ಧಿ ಸಚಿವರು, ಬೆಂಗಳೂರು ನಿರ್ನಾಮ ಮಾಡುವ ಮಂತ್ರಿ . ನಿಮಗೆ ನ್ಯಾಯ ನೀತಿ ಧರ್ಮ ಅನ್ನೋದು ಕಿಂಚಿತ್ತೂ ಇಲ್ಲ. ಬೆಂಗಳೂರಲ್ಲಿ ಏಳೆಂಟು ಸಚಿವರು ಇದ್ದಾರೆ. ಅವರನ್ನು ಬೆಂಗಳೂರು ಸಚಿವರನ್ನು ಮಾಡದೇ, ಬೆಂಗಳೂರಿಗೆ ಸಂಬಂಧ ಪಡದ ವ್ಯಕ್ತಿಯನ್ನು ಮಾಡಿದ್ದೀರಿ ಮುಖ್ಯಮಂತ್ರಿಗಳೇ. ಮೊದಲು ಇವರ ರಾಜೀನಾಮೆ ಪಡೆಯಿರಿ ಎಂದು ಡಿಕೆಶಿ ವಿರುದ್ಧ ಅಶ್ವತ್ಥ್ ವಾಗ್ದಾಳಿ ಮಾಡಿದ್ದಾರೆ.

ನೀನು ರಾಜಕೀಯ ನಿವೃತ್ತಿ ಆದರೂ ಆಗು, ಕಾಂಗ್ರೆಸ್ ಪಕ್ಷವನ್ನು ನಿರ್ನಾಮವಾದರು ಮಾಡು. ಆದರೆ ಈ ಪ್ರಕರಣ ವನ್ನು ಲೋಕಯುಕ್ತಕ್ಕೆ ಕೊಡು. ಡಿಕೆ ಶಿವಕುಮಾರ್ ಮೇಲೆ ಆಪಾದನೆ ಬಂದಿದೆ. ಡಿಸಿಎಂ ಮೇಲೆ ಬಂದಿರುವ ಆಪಾದನೆ ಯನ್ನು ಮೊದಲು ತನಿಖೆ ಮಾಡಿಸಿ ಮುಖ್ಯಮಂತ್ರಿ ಗಳೇ. ತನಿಖೆ ಮಾಡಿರೋರನ್ನು ನಾವು ಏನು ತಡೆದಿದ್ದೀವಾ…? ಚಲುವರಾಯಸ್ವಾಮಿ, ಡಿಕೆ ಶಿವಕುಮಾರ್ ಮೇಲೆ ಆಪಾದನೆ ಬಂದಿದೆ. ಲೋಕಯುಕ್ತದಲ್ಲಿ ತನಿಖೆ ಆಗಲಿ, ಅದನ್ನು ಕೊಡಿ ಎಂದು ಅಶ್ವತ್ಥ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.

‘ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ತನಿಖೆಗೆ ಒಪ್ಪಿಸಿದ್ದೇವೆ’

ಡಿಕೆಶಿಯವರ ಟ್ರ್ಯಾಕ್ ರೆಕಾರ್ಡ್ ಅವರ ವ್ಯಕ್ತಿತ್ವ ತೋರಿಸುತ್ತದೆ: ಅಶ್ವತ್ಥ್ ನಾರಾಯಣ್.

‘ಅವರು ಕಮಿಷನ್ ದರವನ್ನು 40% ನಿಂದ 15% ಗೆ ಇಳಿಸಿರುವುದು ಸಂತೋಷದ ವಿಷಯ’

- Advertisement -

Latest Posts

Don't Miss