Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಲವಾರು ಸಮಾರಂಭಗಳನ್ನು ಉದ್ಘಾಟಿಸಿದರು. ಜವಹರ್ ಲಾಲ್ ನೆಹರುರವರ ಹುಟ್ಟುಹಬ್ಬದ ಅಂಗವಾಗಿ, ಕಾಂಗ್ರೆಸ್ ಸರ್ಕಾರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಒಂದು ಮೊಹಬ್ಬತ್ ಕಿ ದುಕಾನ್ ಉದ್ಘಾಟನಾ ಸಮಾರಂಭ.
ಈ ಸಮಾರಂಭವನ್ನು ಟೇಪ್ ಕತ್ತರಿಸುವ ಮೂಲಕ ಡಿಕೆಶಿ ಉದ್ಘಾಟಿಸಿದ್ದು, ಈ ಬಗ್ಗೆ ಡಿಕೆಶಿ ಟ್ವೀಟ್ ಕೂಡ ಮಾಡಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಘೋಷಿಸಿದ್ದ “ಮೊಹಬ್ಬತ್ ಕಿ ದುಕಾನ್” (ಪ್ರೀತಿಯ ಅಂಗಡಿ) ಪ್ರೀತಿಯನ್ನು ಹಂಚಲು ಸಿದ್ಧವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಜವಾಹರ್ ಬಾಲ್ ಮಂಚ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದ ಬಳಿ ಆರಂಭಿಸಲಾದ “ಮೊಹಬ್ಬತ್ ಕಿ ದುಕಾನ್” ಅನ್ನು ಇಂದು ಉದ್ಘಾಟಿಸಿದೆ. ಬೆಂಗಳೂರಿನಲ್ಲಿ ಇದನ್ನು ಪ್ರಯೋಗಿಕವಾಗಿ ಆರಂಭಿಸಲಾಗಿದ್ದು, ಮೆಟ್ರೋ ನಗರಗಳಾದ್ಯಂತ ವಿಸ್ತರಿಸುವ ಆಲೋಚನೆ ಇದೆ ಎಂದು ಬರೆದಿದ್ದರು.
ಆದರೆ ಈ ಬಗ್ಗೆ ಕಾಮೆಂಟ್ಸ್ ಬಂದಿದ್ದು, ಅಂಗಡಿ ಚೆನ್ನಾಗಿದೆ. ಆದರೆ ನಮಗೆ ಹಿಂದಿ ಹೆಸರು ಬೇಡಾ, ಕನ್ನಡ ಹೆಸರಿಡಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ. ಹಿಂದಿ ನಿಮ್ಮ ವರಿಷ್ಠರ ಜೊತೆ ಇರಲಿ, ಕರ್ನಾಟಕದಲ್ಲಿ ಕನ್ನಡದ್ದೇ ಹೆಸರಿಡಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದ್ದರು ಎಂದು ಜನ ಆರೋಪಿಸುತ್ತಿದ್ದು, ಇದೀಗ ಕಾಂಗ್ರೆಸ್ ಕೂಡ ಇದೇ ಹಾದಿ ಹಿಡಿಯುತ್ತಿದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಘೋಷಿಸಿದ್ದ "ಮೊಹಬ್ಬತ್ ಕಿ ದುಕಾನ್" (ಪ್ರೀತಿಯ ಅಂಗಡಿ) ಪ್ರೀತಿಯನ್ನು ಹಂಚಲು ಸಿದ್ಧವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಜವಾಹರ್ ಬಾಲ್ ಮಂಚ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದ ಬಳಿ ಆರಂಭಿಸಲಾದ "ಮೊಹಬ್ಬತ್ ಕಿ ದುಕಾನ್" ಅನ್ನು ಇಂದು ಉದ್ಘಾಟಿಸಿದೆ. ಬೆಂಗಳೂರಿನಲ್ಲಿ… pic.twitter.com/QBFUCXajGl
— DK Shivakumar (@DKShivakumar) November 14, 2023
ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು
1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್ ಹತ್ಯೆ..
ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವುದೇ ನಮ್ಮ ಪಾಲಿನ ಕದನ ವಿರಾಮ: ನೇತನ್ಯಾಹು