Political News: ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿ ಮೋದಿ ಅವರು, ಮಹಾತ್ಮಾ ಗಾಂಧೀಜಿಯವರ ಬಗ್ಗೆ ಸಿನಿಮಾ ಬರುವವರೆಗೂ ಪ್ರಪಂಚದಲ್ಲಿ ಹಲವರಿಗೆ ಗಾಂಧೀಜಿ ಯಾರು ಅಂತಲೇ ಗೊತ್ತಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ವಿರುದ್ಧ ಸಿಎಂ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಮಹಾತ್ಮ ಗಾಂಧಿಯವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ನನ್ನಲ್ಲಿ ದಿಗ್ಬ್ರಮೆ ಮೂಡಿಸಿದೆ. ಇದನ್ನು ಪ್ರಧಾನಿಗಳ ಅಜ್ಞಾನವೆನ್ನಬೇಕೋ ಅಹಂಕಾರವೆನ್ನಬೇಕೋ ಅವರೇ ಹೇಳಬೇಕು.
ವಿಶ್ವದ ನೂರಾರು ದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿರುವ, ಅಸತ್ಯ, ಅನ್ಯಾಯದ ವಿರುದ್ಧದ ಹೋರಾಟಕ್ಕೆ ಇಂದಿಗೂ ಸ್ಪೂರ್ತಿಯಾಗಿರುವ ಗಾಂಧಿಯವರ ಬಗ್ಗೆ ಮೋದಿಯವರ ಮಾತನ್ನು ಭಾರತೀಯರು ಮಾತ್ರವಲ್ಲ, ಸತ್ಯ, ಶಾಂತಿ, ಅಹಿಂಸೆಯಲ್ಲಿ ನಂಬಿಕೆಯಿಟ್ಟಿರುವ ಯಾರೊಬ್ಬರೂ ಒಪ್ಪಲಾರರು. ವಾಸ್ತವದಲ್ಲಿ ಗಾಂಧಿಯವರ ಬದುಕು ಮತ್ತು ಆದರ್ಶಗಳು ಭಾರತೀಯರಿಗೆ ದಕ್ಕಿರುವುದಕ್ಕಿಂತ ಜಗತ್ತಿನ ಬೇರೆಡೆ ಅರಿವಿಗೆ, ಅನುಸರಣೆಗೆ ಬಂದಿರುವುದೇ ಹೆಚ್ಚು ಎಂದು ಸಿಎಂ ಹೇಳಿದ್ದಾರೆ.
ಗಾಂಧಿ ಎಂದರೆ ಜಾತಿ, ಧರ್ಮ, ಭಾಷೆ, ದೇಶಗಳೆಂಬ ಗಡಿಗಳನ್ನು ಮೀರಿದ ಚಿಂತನೆ. ಭಾರತ ಗಾಂಧೀಜಿಯವರನ್ನು ಸಿನೆಮಾ ಮೂಲಕ ಪರಿಚಯಿಸುವ ಮೊದಲೇ ಗಾಂಧಿ ವಿಶ್ವಕ್ಕೆ ಭಾರತದ ಪರಿಚಯ ಮಾಡಿಸಿದವರು. ನಿಮ್ಮನ್ನೂ ಗಾಂಧಿಯ ಭಾರತದವರೇ ಎಂದು ವಿಶ್ವ ಗುರುತಿಸುತ್ತಿದೆ ಎನ್ನುವುದನ್ನು ಮರೆಯದಿರಿ. ಮಾನ್ಯ ಪ್ರಧಾನಿಯವರೇ, ಸಂಘದಲ್ಲಿ ಕಲಿತ ಪಾಠ ಬಿಟ್ಟು ವಾಸ್ತವಕ್ಕೆ ಕಣ್ತೆರೆಯಿರಿ ಎಂದು ವ್ಯಂಗ್ಯವಾಡಿದ್ದಾರೆ.
ಮಹಾತ್ಮ ಗಾಂಧಿಯವರ ಬಗ್ಗೆ ಪ್ರಧಾನಿ @narendramodi ಅವರು ನೀಡಿರುವ ಹೇಳಿಕೆ ನನ್ನಲ್ಲಿ ದಿಗ್ಬ್ರಮೆ ಮೂಡಿಸಿದೆ. ಇದನ್ನು ಪ್ರಧಾನಿಗಳ ಅಜ್ಞಾನವೆನ್ನಬೇಕೋ ಅಹಂಕಾರವೆನ್ನಬೇಕೋ
ಅವರೇ ಹೇಳಬೇಕು.ವಿಶ್ವದ ನೂರಾರು ದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿರುವ,
ಅಸತ್ಯ, ಅನ್ಯಾಯದ ವಿರುದ್ಧದ ಹೋರಾಟಕ್ಕೆ ಇಂದಿಗೂ ಸ್ಪೂರ್ತಿಯಾಗಿರುವ ಗಾಂಧಿಯವರ ಬಗ್ಗೆ… pic.twitter.com/9JiwkjnF8P— Siddaramaiah (@siddaramaiah) June 1, 2024
ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ
Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ