ಕೊಲ್ಕತ್ತಾ: ಸಾಕು ಪ್ರಾಣಿಗಳನ್ನ ಯಾರು ಸಾಕಿರುತ್ತಾರೋ, ಅವರಿಗೆ ಆ ಪ್ರಾಣಿ ಮನೆ ಮಕ್ಕಳಂತೆ ಇರುತ್ತದೆ. ನಾಯಿ, ಬೆಕ್ಕು, ದನ-ಕರು, ಹೀಗೆ ಸಾಕು ಪ್ರಾಣಿಗಳ ಮೇಲೆ ಮಾಲೀಕನಿಗೆ ಅಪಾರ ಪ್ರೀತಿ ಇರುತ್ತದೆ. ಕೊಲ್ಕತ್ತಾದಲ್ಲಿ ಓರ್ವ ತಾನು ಸಾಕಿದ ಗಿಳಿ ಸತ್ತಿತೆಂದು, ಹಿಂದೂ ಧರ್ಮದ ಪದ್ಧತಿ ಪ್ರಕಾರ ಅದರ ಅಂತ್ಯಸಂಸ್ಕಾರ ಮಾಡಿದ್ದಾನೆ.
ಪಶ್ಚಿಮ ಬಂಗಾಳದ, ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ, ಮಜುಂದಾರ್ ಎಂಬಾತ, ಗಿಳಿಯನ್ನು ಸಾಕಿದ್ದ. ಅದಕ್ಕೆ ಭಕ್ತೋ ಎಂದು ಹೆಸರನ್ನಿಟ್ಟಿದ್ದ. ಆ ಗಿಳಿ ಅನಾರೋಗ್ಯದಿಂದ ತೀರಿಹೋಗಿದ್ದಕ್ಕೆ, ಮನೆಗೆ ಅರ್ಚಕರನ್ನ ಕರೆಸಿ, ಪದ್ಧತಿ ಪ್ರಕಾರ ಅದರ ಅಂತ್ಯಸಂಸ್ಕಾರ ಮಾಡಿದ್ದಾನೆ. ನಂತರ ಗಿಳಿಯ ಪಾರ್ಥೀವ ಶರೀರವನ್ನು ನೈಹಟಿಯ ಹೂಗ್ಲಿನದಿ ಘಾಟ್‌ಗೆ ಕೊಂಡೊಯ್ಯಲಾಯಿತು. ಆ ಗಿಳಿಯನ್ನು ಮಜುಂದಾರ್ 25 ವರ್ಷಗಳಿಂದ ಸಾಕಿದ್ದ. ಹಾಗಾಗಿ 25 ಜನರನ್ನ ಕರೆಸಿ, ಊಟ ಹಾಕಿಸಿದ್ದಾನೆ. ಹಲವು ವರ್ಷಗಳಿಂದ ಸಾಕಿದ್ದ ಸಾಕು ಪ್ರಾಣಿ ಸತ್ತಾಗ, ಅದರ ಮಾಲೀಕನಿಗಾಗುವ ದುಃಖ ಎಂಥದ್ದು ಎಂದು ಅದನ್ನು ಅನುಭವಿಸಿದವರಿಗೇ ಗೊತ್ತಿರುತ್ತದೆ.
ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..