Hassan News: ಹಾಸನ: ಹಾಸನದ ಹೊರವಲಯದ ಚಿಕ್ಕ ಹೊನ್ನೇನಹಳ್ಳಿಯ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದು, ದುಷ್ಕರ್ಮಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಕೆಲ ಯುವಕರು ಕೆರೆಯನ್ನು ಗುತ್ತಿಗೆ ಪಡೆದು ಕೆರೆಗೆ ಒಂದು ಲಕ್ಷ ಮೀನು ಬಿಟ್ಟಿದ್ದರು. ಮೀನು ಬಿಟ್ಟು 8 ತಿಂಗಳ ಬಳಿಕ, 400 ಗ್ರಾಮ್ ತೂಕದಷ್ಟು ಆ ಮೀನುಗಳು ಬೆಳೆದಿದ್ದವು. ಆದರೆ ಎರಡು ದಿನಗಳಿಂದ ಮೀನುಗಳು ಸತ್ತು ತೇಲುತ್ತಿದೆ. ಕೆರೆಗೆ ವಿಷ ಹಾಕಿರುವುದರಿಂದಲೇ ಮೀನುಗಳು ಸತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಾಗರಾಜ್, ಕರ್ನಾಟಕ ಟಿವಿ ಹಾಸನ
ಕರೀಮುದ್ದಾನಹಳ್ಳಿ ಗ್ರಾ.ಪಂ ಕರ್ಮಕಾಂಡ: ಒಳಚರಂಡಿ ಗಬ್ಬೆದ್ದು ನಾರುತ್ತಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳು..
ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಜಮೀನು ಮಂಜೂರು: ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ