Political News: ಶಾಸಕರನ್ನ ಯಾರು ನಿರ್ಲಕ್ಷ್ಯ ಮಾಡೋದಕ್ಕೆ ಅಗೊದಿಲ್ಲಾ: ಬಿ.ಕೆ.ಹರಿಪ್ರಸಾದ್

Political News: ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾಧ್ಯಮದ ಜತೆ ಮಾತನಾಡಿದ್ದು,  ಆನೆಗಳ ಹಾವಳಿ ಹಿನ್ನೆಲೆ ಶಾಸಕರ ರಾಜೀನಾಮೆ ಒತ್ತಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಅದಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಜೊತೆಗೆ ಪ್ರಾಣಿಗಳಿಗೂ ತೊಂದರೆ ಅಗಬಾರದು. ಶಾಸಕರು ಸ್ಪೀಕರ್ ಜೊತೆ ಚರ್ಚೆ ಮಾಡ್ತಾರೆ. ಬೆಳಗಾವಿ ಅದಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಾರೆ. ಆನೆಗಳನ್ನ ಊರಿಗೆ ಕರೆದುಕೊಂಡು ಬರೋಕೆ ಆಗುತ್ತಾ ಕಾಡಲ್ಲೆ ಬಿಡಬೇಕು. ಎಲ್ಲರ ಜೊತೆ ಚರ್ಚೆ ಮಾಡಿ ಪರಿಹಾರ ಕೊಡ್ತಾರೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಶಾಸಕರ ಮಾತಿಗೆ ಬೆಲೆ ಇಲ್ಲಾ ಅಧಿಕಾರಿಗಳ ನಿರ್ಲಕ್ಷ್ಯ ಆಗ್ತಿದ್ಯಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಹರಿಪ್ರಸಾದ್, ಶಾಸಕರನ್ನ ಯಾರು ನಿರ್ಲಕ್ಷ್ಯ ಮಾಡೋದಕ್ಕೆ ಅಗೊದಿಲ್ಲಾ. ನಾವು ಕಾಡು ಪ್ರಾಣಿಗಳ ಜೊತೆ ವ್ಯವಹಾರ ಮಾಡ್ತಿರೋದು. ಸ್ವಲ್ಪ ಸೂಕ್ಷ್ಮವಾದ ವಿಚಾರ. ಕಾಡುಪ್ರಾಣಿಗಳು ಅಧಿಕಾರಿಗಳು, ಶಾಸಕರ ಮಾತು ಕೇಳೊದಿಲ್ಲಾ. ಯಾವುದೇ ರೀತಿಯ ದಕ್ಕೆ ಆಗದಂತೆ ಒಳ್ಳೆ ತೀರ್ಮಾನ ಮಾಡಲಾಗುತ್ತೆ ಎಂದು ಹೇಳಿದ್ದಾರೆ.

ಶಾಸಕರ ಜೊತೆ ಮಾತಾಡಿದ್ದಿರಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಅವರ ನೋವನ್ನೆಲ್ಲಾ ಹೇಳಿಕೊಂಡಿದ್ದಾರೆ. ಪರಿಹಾರ ಏನೇನು ಅಂತಾ ಹೇಳಿದ್ದೇವೆ. ಯಾರಿಗೆ ಸಮಸ್ಯೆ ಆಗದಂತೆ ಪರಿಹಾರ ಮಾಡಲಾಗುತ್ತೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

About The Author