Sunday, September 8, 2024

Latest Posts

Deer-ಜಿಂಕೆಗಳ ಹಾವಳಿಯಿಂದ ಕಂಗಾಲಾದ ಹುಬ್ಬಳ್ಳಿ ರೈತರು

- Advertisement -

ಹುಬ್ಬಳ್ಳಿ:ರೈತರ ಜಮೀನುಗಳಲ್ಲಿ ಬಿಯರ್ ಬಾಟಲಿಗಳ ಸದ್ದುಮಾಡಿತ್ತಿವೆ.ಹಾಗಂತ ಹೊಲಗಳಲ್ಲಿ ಕುಡುಕರ ಹಾವಳಿ ಹೆಚ್ಚಿದೆ ಅಂದ್ಕೋಬೇಡಿ..! ಜಿಂಕೆಗಳಿಂದ ಬೆಳೆಗಳ ರಕ್ಷಣೆಗೆ ಬಾಟಲಿ ಮೊರೆ ಹೋಗಿದ್ದಾರೆ. ಇಲ್ಲಿನ ರೈತರು ಮುಂಗಾರು ಮಳೆ ಕೊರತೆಯಿಂದ ಕಂಗಾಲಾಗಿದ್ದು  ಜಿಂಕೆ ಮತ್ತು ಚಿಗರಿಗಳಿಂದ ಹಾವಳಿ ಜಾಸ್ತಿಯಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ  ಮತ್ತು ಹುಬ್ಬಳ್ಳಿ ತಾಲೂಕಿನಲ್ಲಿ ಜಿಂಕೆಗಳ ಇನ್ನಿಲ್ಲದ ಹಾವಳಿ ಇಡುತ್ತಿವೆ .ಶಿರಗುಪ್ಪಿ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನರ್ತಿ, ಯರಿನಾರಯಣಪುರ ಮತ್ತಿತರ ಕಡೆ  ಹಿಂಡುಗಟ್ಟಲೆ ಬಂದು ದಾಳಿ ಮಾಡಿತ್ತಿವೆ ಶೇಂಗಾ, ಹೆಸರು, ಉದ್ದು, ಸೋಯಾಬಿನ್, ಮೆಣಸಿನಕಾಯಿ ಇತ್ಯಾದಿ ಬೆಳೆಗಳ ರಕ್ಷಣೆಗೆ ರೈತರ ಇನ್ನಿಲ್ಲದ ಸರ್ಕಸ್ ಜಿಂಕೆಯಿಂದ ರಕ್ಷಣೆಗೆ ಮಾಡುವಂತಾಗಿದೆ ಹಗಲು-ರಾತ್ರಿ ಜಿಂಕೆಗಳನ್ನು ಓಡಿಸಲಾಗದ ಅಸಹಾಯಕರಾಗಿದ್ದಾರೆ.ಅಂತೂ ಇಂತೂ ಕೊನೆಗೆ ಉಪಾಯವೊಂದನ್ನು ರೈತರು ಕಂಡುಕೊಂಡಿದ್ದಾರೆ ಕುಡಿದು ಬಿಸಾಡಿದ ಬಿಯರ್ ಬಾಟಲಿಗಳನ್ನೇ ಜಿಂಕೆಗಳ ವಿರುದ್ಧ ಅಸ್ತ್ರ ಮಾಡಿಕೊಂಡಿದ್ದಾರೆ

ಹೊಲದ ವಿವಿಧೆಡೆ ಕೋಲನ್ನು ನೆಟ್ಟು, ಅದಕ್ಕೆ ಎರಡೆರಡು ಬಿಯರ್ ಬಾಟಲಿ ನೇತು ಹಾಕಿದ್ದಾರೆಜೋರಾಗಿ ಗಾಳಿ ಬೀಸಿದಾಗ ಗಾಳಿಗೆ ಬಿಯರ್ ಬಾಟಲ್ ಒಂದಕ್ಕೊಂದು ತಾಗಿ ಜೋರಾದ ಸದ್ದು ಮಾಡುತ್ತಿವೆ ಬಾಟಲಿಗಳ ಸದ್ದಿಗೆ ಬೆದರಿ  ಜಿಂಕೆಗಳು ಜೋರಾಗಿ ಓಡಿತ್ತಿವೆ.ಇದರಿಂದ ಜಿಂಕೆಗಳ ಹಾವಳಿ  ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಆದರೆ ರೈತರು ಜಿಂಕೆಗಳಿಂದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಅರಣ್ಯ ಇಲಾಖೆಗೆ ಜಿಂಕೆಗಳನ್ನು ಆದಷ್ಟು ಬೇಗ ಅರಣ್ಯ  ಸಾಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಾಗೂ ನಾಶವಾಗಿರುವ ಬೆಳೆಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Kashi Yatra- 5 ಸಾವಿರ ಸಬ್ಸಿಡಿ ದರದಲ್ಲಿ ಕಾಶಿ ಪ್ರವಾಸ

Grhalaxmi Yojana : ಗೃಹಲಕ್ಷ್ಮೀ ಯೋಜನೆಗೆ ನೋಂದಣಿಗಾಗಿ ಹೀಗೆ ಮಾಡಿ..?!

Bjp : ಸರಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ

 

- Advertisement -

Latest Posts

Don't Miss