Thursday, August 7, 2025

Latest Posts

ಪೂನಂ ವಿರುದ್ಧ ಮಾನನಷ್ಟ ಮೊಕದ್ದಮೆ: ಆರೋಪ ಸಾಬೀತಾದರೆ ಕಟ್ಟಲೇಬೇಕು 100 ಕೋಟಿ ದಂಡ

- Advertisement -

Bollywood News: ಕೆಲ ದಿನಗಳ ಹಿಂದೆ ನಟಿ, ಮಾಡೆಲ್ ಪೂನಂ ಪಾಂಡೆ ತಾನು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದೇನೆ ಎಂದು, ತನ್ನ ಮ್ಯಾನೇಜರ್ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದರು.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿತ್ತು. ಇದೀಗ ಫೈಜರ್ ಅನ್ಸಾರಿ ಎಂಬುವವರು, ಪೂನಂ ಪಾಂಡೆ ಮಾಡಿರುವ ಕೆಲಸಕ್ಕೆ ಎಲ್ಲ ಮಾಡೆಲ್‌ಗಳನ್ನು ಜನ ಅನುಮಾನದಿಂದಲೇ ಕಾಣುವಂತಾಗಿದೆ ಎಂದು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕೇಸ್ ಸಾಬೀತಾದರೆ, ನಟಿ ಪೂನಂ ಪಾಂಡೆ 100 ಕೋಟಿ ದಂಡ ಕಟ್ಟಬೇಕಾಗುತ್ತದೆ.

ಗರ್ಭಕಂಠ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಸಾವಿಗೀಡಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸುಳ್ಳು ಸುದ್ದಿ ಹಬ್ಬಿಸಿದ್ದರು. ಎಲ್ಲೆಡೆ ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ..? ಅದು ಬರಬಾರದು ಅಂದ್ರೆ ನಾವು ಏನು ಮಾಡಬೇಕು..? ಹೀಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಈ ರೀತಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಲಿ ಎಂಬ ಕಾರಣಕ್ಕೆ ನಾನು ಸತ್ತುಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದೆ. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪೂನಂ ಪಾಂಡೆ ಇಂಡು ವೀಡಿಯೋ ಮಾಡಿ, ತನ್ನ ಇನ್‌ಸ್ಟಾ ಗ್ರಾಮ್ ಅಕೌಂಟ್‌ನಲ್ಲಿ ವೀಡಿಯೋ ಮಾಡಿದ್ದರು. ಕ್ಷಮೆಯೂ ಕೇಳಿದ್ದರು.

ಸಂಸತ್‌ನತ್ತ ರಜತ್ ಚಿತ್ತ: ವಿವಿಧ ಮಠದ ಸ್ವಾಮೀಜಿಗಳ ಬೆಂಬಲ

‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’

ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್‌: ಸಚಿವ ಕೆ.ಎನ್.ರಾಜಣ್ಣ

- Advertisement -

Latest Posts

Don't Miss