ಕರ್ನಾಟಕ ಟಿವಿ ಸಂಪಾದಕೀಯ : ಕೇಜ್ರಿವಾಲ್ ಅಣ್ಣಾ ಹಜಾರೆ ಜೊತೆ ಲೋಕಪಾಲ್ ಹೋರಾಟಕ್ಕೆ ಧೂಮುಕಿದಾಗ ಯಾರೂ ಕೂಡ ಕೇಜ್ರಿವಾಲ್ ಭವಿಷ್ಯದಲ್ಲಿ ದೆಹಲಿ ಸಿಎಂ ಆಗ್ತಾರೆ ಅಂತ ಲೆಕ್ಕಾಚಾರ ಹಾಕಿರಲಿಲ್ಲ.. ಎಎಪಿ ಪಕ್ಷ ಕಟ್ಟಿದ ಒಂದೇ ವರ್ಷದಲ್ಲಿ ಎದುರಾದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಉಂಟಾದಅತಂತ್ರ ಫಲಿತಾಂಶದ ಲಾಭ ಪಡೆದ ಕೇಜ್ರಿವಾಲ್ ಕಾಂಗ್ರೆಸ್ ಜೊತೆ ಕೈಜೋಡಿಸಿ ಸಿಎಂ ಸ್ಥಾನಕ್ಕೇರಿದ್ರು.. ಆದ್ರೆ ಆರೇ ತಿಂಗಳಲ್ಲಿ ದೆಹಲಿ ಬೀದಿಯಲ್ಲಿ ಪ್ರತಿಭಟನೆ ಕೂತು ಭಾರೀ ವಿವಾದಕ್ಕೆ ಕಾರಣವಾಗಿದ್ರು.. ನಂತರ ದೆಹಲಿ ವಿಧಾನಸಭೆಗೆ ಎದುರಾದ ಮಧ್ಯಂತರ ಚುನಾವಣೆಯಲ್ಲಿ ದೇಶದ ರಾಜಕೀಯ ಪಂಡಿತರೇ ಮೂರ್ಛೆ ಹೋಗುವಂತ ದಿಗ್ವಿಜಯ ಸಾಧಿಸಿದ್ರು.. 70 ಕ್ಷೇತ್ರಗಳಲ್ಲಿ 67 ಸ್ಥಾನಗಳಲ್ಲಿ ಗೆದ್ದ ಎಎಪಿ ದೇಶಾದ್ಯಂತ ಸತತ ಗೆಲುವಿನ ಅಲೆಯಲ್ಲಿ ತೇಲ್ತಿದ್ದ ಬಿಜೆಪಿಯನ್ನ 3 ಸ್ಥಾನಕ್ಕೆ ಕುಸಿಯುವಂತೆ ಮಾಡಿದ್ರು.. ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ ಒಂದು ಎಂಎಲ್ ಎ ಸ್ಥಾನವನ್ನೂ ಗೆಲ್ಲದೇ ಭಾರೀ ಮುಖಭಂಗ ಅನುಭವಿಸಿತ್ತು..
5 ವರ್ಷದಲ್ಲಿ ದೆಹಲಿ ಚಿತ್ರಣವನ್ನೇ ಬದಲಾಯಸಿದ ಕೇಜ್ರಿವಾಲ್..!
ಅಭೂತಪೂರ್ವ ಗೆಲುವು ಸಾಧಿಸಿ ದೆಹಲಿ ಗದ್ದುಗೆ ಏರಿದ ಕೇಜ್ರಿವಾಲ್ ಮೊದಮೊದಲು ಮನೀಷ್ ಸಿಸೋಡಿಯಾರನ್ನ ಡಿಸಿಎಂ ಮಾಡಿ ತಾನು ರಾಷ್ಟ್ರ ರಾಜಕಾರಣದ ಕಡೆ ಮುಖ ಮಾಡಲು ಪ್ಲಾನ್ ಮಾಡಿದ್ರು.. ಆದ್ರೆ, ಯಾವಾಗ 2017ರ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ 272 ಸ್ಥಾನಗಳಲ್ಲಿ ಬಿಜೆಪಿ 181, ಎಎಪಿ 41, ಕಾಂಗ್ರೆಸ್ 31 ಸ್ಥಾನ ಗಳಿಸಿತು.. ಆಗ ಜನ ಮತ್ತೆ ಬಿಜೆಪಿಗೆ ಮಣೆ ಹಾಕಿದ್ರೋ ಇದರಿಂದ ಎಚ್ಚೆತ್ತುಕೊಂಡ ಕೇಜ್ರಿವಾಲ್ ಬೇರೆ ಕಡೆ ಗಮನಕೊಡುವುದನ್ನ ಬಿಟ್ಟು ದೆಹಲಿ ಕೋಟೆ ಭದ್ರ ಮಾಡಿಕೊಳ್ಳಲು ಅಭಿವೃದ್ಧಿ ಕಡೆ ಗಮನ ಕೊಟ್ರು..
ದೆಹಲಿಯಲ್ಲಿ ಮೋದಿ ಮೀರಿದ ಜನಪ್ರಿಯತೆ ಕೇಜ್ರಿವಾಲ್ ಗಳಿಸಿದ್ದೇಗೆ..?
ದೆಹಲಿಯಲ್ಲಿ ಈಗ ಯಾವ ಮೂಲೆಗೆ ಹೋಗಿ ಕೇಳಿದ್ರು ಜನ ಮಾತಾಡೋದು ಎಎಪಿ ಸರ್ಕಾರದ ಬಗ್ಗೆ.. ದೆಹಲಿ ಸಿಎಂ ಯಾರಾಗ ಬೇಕು ಅಂದ್ರೆ ಮರು ಮಾತಾಡದೆ ಕೇಜ್ರಿವಾಲ್ ಅಂತಾರೆ.. ಯಾಕಂದ್ರೆ ವಿದ್ಯುತ್ ಬಿಲ್, ಬಾಟರ್ ಬಿಲ್ ವಿಚಾರದಲ್ಲಿ ಕೇಜ್ರಿವಾಲ್ ತೆಗೆದುಕೊಂಡ ಮಹತ್ವದ ನಿರ್ಧಾರ. ಿದರ ಜೊತೆ ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಹೈಟೆಕ್ ರೂಪ ಪಡೆದುಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆ ಮೀರಿಸುವ ಮಟ್ಟಿಗೆ ಉಚಿತ ಚಿಕಿತ್ಸೆ ಕೊಡುವಲ್ಲಿ ಕೇಜ್ರಿವಾಲ್ ಸರ್ಕಾರ ಮಾಡಿದ ಜಾದು ಜನರ ಮನಸ್ಸನ ಗೆಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ..
ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಎಎಪಿಯನ್ನ ಸೋಲಿಸುತ್ವಾ..?
ದೆಹಲಿಯಲ್ಲಿ ಸದ್ಯಕ್ಕೆ ಎಎಪಿ ಬಂಡೆಯಷ್ಟು ಗಟ್ಟಿಯಾಗಿ ನೆಲೆಯೂರಿದೆ.. ಇದು ವರೆಗೂ ಬಂದಿರುವ ಸರ್ವೇಗಳ ಪ್ರಕಾರ ಮತ್ತೆ 100ಕ್ಕೆ 100ರಷ್ಟು ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೇರಲಿದ್ದಾರೆ.. ಆದ್ರೆ, ಜೆ.ಪಿ ನಡ್ಡಾ ನೇತೃತ್ವದ ಬಿಜೆಪಿ ಸಹ ಕೇಜ್ರಿವಾಲ್ ಕೈಯಿಂದ ದೆಹಲಿ ಕೋಟೆ ವಶಪಡಿಸಿಕೊಳ್ಳಲು ಹರಸಾಹಸ ಪಡ್ತಿದೆ.. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಕೈಚೆಲ್ಲಿತ್ತು. ಆದ್ರೆ ಈ ಬಾರಿ ತ್ರಿಕೋನ ಸ್ಪರ್ಧೆಗೆ ವೇದಿಕೆ ರೆಡಿ ಮಾಡಿದೆ.. ಕಳೆದ ಬಾರಿ ಕಾಂಗ್ರೆಸ್ ಕೇವಲ 9.2% ಮತಗಳಿಸಿತ್ತು.. ಬಿಜೆಪಿ 32% ಮತ ಗಳಿಸಿತ್ತು.. ಎಎಪಿ 54 % ಮತಗಳಿಸಿ ದಿಗ್ವಿಜಯ ಸಾಧಿಸಿತ್ತು.. ಆದ್ರೀಗ ಎಎಪಿ ಎಷ್ಟೇ ಅಭಿವೃದ್ಧಿ ಮಾಡಿದ್ರು.. ಬಿಜೆಪಿ, ಕಾಂಗ್ರೆಸ್ ಮತಗಳಿಕೆ ಪ್ರಮಾಣ 55 ದಾಟಿದ್ರೆ ಎಎಪಿ ಅಧಿಕಾರಕ್ಕೇರುವ ಕನಸು ಭಗ್ನವಾಗಬಹುದೋನೋ..
ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಈ ಬಾರಿ ದೆಹಲಿ ಚುನಾವಣೆಯಲ್ಲಿ ಗೆಲ್ಲೋದು ಯಾರು..? 1.. ಎಎಪಿ 2.. ಬಿಜೆಪಿ 3.. ಕಾಂಗ್ರೆಸ್ ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ