Katmandu News: ಕ್ರಿಕೇಟಿಗ ಸಂದೀಪ್ ಲಮಿಚಾನೆ(24) ಅತ್ಯಾಚಾರ ಆರೋಪ ಸಾಬೀತಾಗಿದ್ದು, 8 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದಾರೆ. 17 ವರ್ಷದ ಯುವತಿಯನ್ನು ಸಂದೀಪ್ ಅತ್ಯಾಚಾರ ಮಾಡಿದ್ದರೆಂದು, 2023ರಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಕಠ್ಮಂಡು ನ್ಯಾಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 3 ಲಕ್ಷ ದಂಡ ವಿಧಿಸಿದ್ದು, ಸಂತ್ರಸ್ತೆಗೆ 2 ಲಕ್ಷ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
2022ರ ಆಗಸ್ಟ್‌ನಲ್ಲಿ ತನ್ನನ್ನು ಹೊಟೇಲ್‌ಗೆ ಕರೆದುಕೊಂಡು ಹೋಗಿ, ಅಲ್ಲಿನ ಕೊಠಡಿಯನ್ನು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು, ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಸಂದೀಪ್ ವಿರುದ್ಧ ದೂರು ದಾಖಲಾಗಿತ್ತು. ಇದೇ ವೇಳೆ ಕ್ರಿಕೇಟಿಗನನ್ನು ಪೊಲೀಸರು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಸಂದೀಪ್, ತಮ್ಮ ತಂಡಕ್ಕಾಗಿ ಕ್ರಿಕೇಟ್ ಆಡುತ್ತಿದ್ದರು.
2023ರ ಡಿಸೆಂಬರ್‌ನಲ್ಲಿ ಆರೋಪ ಸಾಬೀತಾದ ಕಾರಣ, ಅವರನ್ನು ಮತ್ತೆ ಬಂಧಸಲಾಗಿತ್ತು. ಇದೀಗ ಶಿಕ್ಷೆ ವಿಧಿಸಿದ್ದು, ಸಂದೀಪ್ 8 ವರ್ಷ ಜೈಲು ಕಂಬಿ ಎಣಿಸಬೇಕಾಗಿದೆ.
ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..