Sunday, December 22, 2024

Latest Posts

200 ಯೂನಿಟ್ ವರೆಗೂ ಉಚಿತ ವಿದ್ಯುತ್- ದೆಹಲಿ ಜನತೆಗೆ ಕೇಜ್ರಿವಾಲ್ ಬಂಪರ್ ಗಿಫ್ಟ್

- Advertisement -

ದೆಹಲಿ: 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡೋದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸೋ ಮೂಲಕ ದೆಹಲಿ ಮಂದಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಇಡೀ ದೇಶದಲ್ಲೇ ದೆಹಲಿಯಲ್ಲಿ ವಿದ್ಯುತ್ ಗೆ ಅತ್ಯಂತ ಕಡಿಮೆ ದರ ನಿಗದಿಪಡಿಸಲಾಗಿದೆ ಎಂದರು. ಬಳಿಕ ಮಾತನಾಡಿದ ಕೇಜ್ರಿವಾಲ್, ಇಂದಿನಿಂದ ದೆಹಲಿಯಾದ್ಯಂತ 200 ಯೂನಿಟ್ ವೆರೆಗೂ ವಿದ್ಯುತ್ ಸಂಪೂರ್ಣ ಉಚಿತವಾಗಲಿದ್ದು, 201-400 ಯೂನಿಟ್ ವಿದ್ಯುತ್ ಗೆ ರಾಜ್ಯ ಸರ್ಕಾರದ ಸಬ್ಸೀಡಿಯಡಿ ಅರ್ಧ ಬೆಲೆ ಮಾತ್ರ ನಿಗದಿಪಡಿಸಲಾಗುತ್ತೆ ಅಂತ ಘೋಷಿಸಿದ್ರು. ಹೀಗಾಗಿ 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುವವರಿಗೆ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವೇ ಇಲ್ಲ ಅಂತ ಮಾಹಿತಿ ನೀಡಿದ್ರು.

ಇನ್ನು ಕೇಜ್ರಿವಾಲ್ ಘೋಷಣೆ ಮಾಡಿರುವ ಈ ಯೋಜನೆಯಿಂದಾಗಿ 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತಿರುವ ಶೇ.33ರಷ್ಟು ಮಂದಿಗೆ ಉಪಯುಕ್ತವಾಗಲಿದೆ. ಇದೇ ವೇಳೆ ಮಾತನಾಡಿದ ಕೇಜ್ರಿವಾಲ್, ವಿಐಪಿಗಳಿಗಳು ರಾಜಕಾರಣಿಗಳಿಗೆ ಉಚಿತ ವಿದ್ಯುತ್ ನೀಡೋ ಬಗ್ಗೆ ಯಾರೂ ಬಾಯಿಬಿಚ್ಚೋದಿಲ್ಲ, ಆದರೆ ನಾನು ಜನಸಾಮಾನ್ಯರ ಅನುಕೂಲಕ್ಕಾಗಿ ಈ ಯೋಜನೆ ಘೋಷಿಸಿರೋದು ತಪ್ಪಲ್ಲ ಅಂತ ಇದೇ ವೇಳೆ ಸಿಎಂ ಕೇಜ್ರಿವಾಲ್ ಪ್ರತಿಪಾದಿಸಿಕೊಂಡ್ರು. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಾಗಿ ಕೇಜ್ರಿವಾಲ್ ನೂತನ ಯೋಜನೆಗಳ ಘೋಷಣೆ ಮುಂದುವರಿದಿದೆ.

- Advertisement -

Latest Posts

Don't Miss