Delhi News: ದೆಹಲಿ ಮೆಟ್ರೋ ಅನ್ನೋ ಪುಕ್ಕಟೆ ಎಂಟರ್‌ಟೇನ್‌ಮೆಂಟ್ ಕೊಡುವ, ಸೋಶಿಯಲ್ ಮೀಡಿಯಾಗೆ ಒಂದು ಕಂಟೆಂಟ್ ಕೊಡುವ ಸ್ಥಳವಾಗಿ ಮಾರ್ಪಾಡಾಗಿದೆ. ಮಾಡಲು ಕೆಲಸವಿಲ್ಲದೆ, ಟ್ಯಾಲೆಂಟ್ ಇಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲಂತಲೇ ಕೆಲವರು ದೆಹಲಿ ಮೆಟ್ರೋಗೆ ಹೋಗಿ, ಅಸಭ್ಯವಾಗಿ ವರ್ತಿಸಿ, ಫೇಮಸ್ ಆಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ದೆಹಲಿ ಮೆಟ್ರೋ ಸ್ಥಿತಿ ಬಂದಿದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಯುವಕನೋರ್ವ ಮೆಟ್ರೋದಲ್ಲೇ ಮೊಟ್ಟೆ ತಿಂದು, ಮದ್ಯಪಾನ ಮಾಡಿದ್ದಾನೆ. ಮೆಟ್ರೋದಲ್ಲಿ ಆಹಾರ ಸೇವನೆ ನಿಷೇಧವಿದೆ. ಆದರೂ ಕೂಡ ಈ ವ್ಯಕ್ತಿ ಮೊಟ್ಟೆ ತಿಂದು, ಮದ್ಯಪಾನ ಮಾಡಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನು ಈ ರೀತಿ ಮೊಟ್ಟೆ ತಿಂದವನ ಹೆಸರು ಆಕಾಶ್ ಕುಮಾರ್. ಈತ ಶಹದಾರಾ ನಿವಾಾಸಿಯಾಗಿದ್ದು, ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ. ಪೊಲೀಸರು ಆಕಾಶ್‌ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಯಲ್ಲಿ ನಾನು ಮೆಟ್ರೋದಲ್ಲಿ ಮೊಟ್ಟೆ ಸೇವಿಸಿದ್ದು ಸತ್ಯ. ಆದರೆ ನಾನು ಮದ್ಯಪಾನ ಸೇವಿಸಿರಲಿಲ್ಲ. ಅದೊಂದು ಪಾನೀಯವೆಂದು ಹೇಳಿದ್ದಾನೆ.
ಅಲ್ಲದೇ, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಮಾಡಿದ ಕೆಲಸವಾಗಿದ್ದು, ಜನರ ಗಮನ ಸೆಳೆಯಲು ನಾನು ಆ ಬಾಟಲಿಯಲ್‌ಲಿ ಪಾನೀಯವನ್ನು ತುಂಬಿಸಿ, ಕುಡಿದಿದ್ದೆ ಎಂದು ಆಕಾಶ್ ಒಪ್ಪಿಕೊಂಡಿದ್ದಾನೆ. ವೆಲ್ಕಮ್ ನಿಂದ ಕರ್ಕಾರ್ಡೂಮಾಗೆ ಹೋಗುವಾಗ, ಈ ವೀಡಿಯೋವನ್ನು ತಾನೇ ಮಾಡಿಕೊಂಡಿದ್ದು, ಇಂಥ ಕೃತ್ಯ ಮಾಡಿದ್ದಕ್ಕೆ, ಮೆಟ್ರೋ ರೈಲ್ವೆ ಕಾಯ್ದೆ ಸೆಕ್ಷನ್ 59ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.