Chikkamagaluru News: ಚಿಕ್ಕಮಗಳೂರು : 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಹಿನ್ನೆಲೆ ಡಿಡಿಪಿಐ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ
ಮೂಡಿಗೆರೆ ತಾಲೂಕಿನ ಕಡೆಮಕ್ಕಲ್, ಹೆಸ್ಗಲ್ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಡಿಪಿಐ ರಂಗನಾಥಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಿಡಿಪಿಐ ರಂಗನಾಥಸ್ವಾಮಿ ಅವರು ಎಸ್.ಡಿ.ಎ.ಅಸ್ರಾರ್ ಅಹಮದ್ ಮೂಲಕ ಡೀಲ್ ಕುದುರಿಸುತ್ತಿದ್ದು, ಮುಂಗಡವಾಗಿ 1000 ಸಾವಿರ ಹಣ ಪಡೆದಿದ್ದರು.
ಒಂದು ಫೈಲ್‍ಗೆ 5 ಸಾವಿರದಂತೆ 2 ಫೈಲ್‍ಗೆ 10 ಸಾವಿರ ಕೇಳಿದ್ದರು. ಈ ಬಗ್ಗೆ ಮೂಡಿಗೆರೆ ಮೂಲದ ಗುತ್ತಿಗೆದಾರ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈ ಹಿನ್ನೆಲೆ ಡಿಡಿಪಿಐ ರಂಗನಾಥ ಸ್ವಾಮಿ ಮೇಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದ ತಂಡದಿಂದ ದಾಳಿ ನಡೆದಿದೆ.
ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ಎರಡು ಬಣಗಳಿವೆ: ಮಾಜಿ ಸಚಿವ ಶ್ರೀರಾಮುಲು
ಹಾಸನಾಂಬ ದೇಗುಲದ ಕಳಸ ಪ್ರತಿಷ್ಠಾಪನೆಗೆ ಕರಿಯಲಿಲ್ಲವೆಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಗರಂ