Movie News: ಬರೀ ಬೇಡದ ವಿವಾದ ಎಬ್ಬಿಸಿ ಇಲ್ಲಿಯವರೆಗೂ ಫೇಮಸ್ ಆದ ನಟಿ, ಮಾಡೆಲ್ ಅಂದ್ರೆ ಪೂನಂ ಪಾಂಡೆ. ನಿನ್ನೆವರೆಗೂ ತರಹೇವಾರಿ ಹೇಳಿಕೆ ಕೊಟ್ಟು, ವಿವಾದ ಎಬ್ಬಿಸಿಕೊಂಡು, ಗಾಸಿಪ್ ಕ್ವೀನ್ ಎಂದೇ ಖ್ಯಾತಳಾಗಿದ್ದ ಪೂನಂ ಪಾಂಡೆ, ನಿನ್ನೆ ಹೇಳಿದ ಸುಳ್ಳು ಮಾತ್ರ ಕ್ಷಮಿಸಲು ಅಸಾಧ್ಯವಾಗಿದ್ದು. ಓರ್ವ ಸೆಲೆಬ್ರಿಟಿ ಆಗಿ, ಈ ರೀತಿ ಸುಳ್ಳು ಸುಳ್ಳು ಸುದ್ದಿ ಹಬ್ಬಿಸಿದ್ದು ತಪ್ಪು, ಈಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕೆಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಪೂನಂ ಪಾಂಡೆ ಅನ್ನೋ ಅಭಿಯಾನವೂ ಶುರುವಾಗಿದೆ.
ನಿನ್ನೆ ನಟಿ, ಮಾಡೆಲ್ ಪೂನಂ ಪಾಂಡೆ ನಿಧನಳಾಗಿದ್ದಾಳೆ ಎಂಬ ಸುದ್ದಿ ದೇಶದೆಲ್ಲೆಡೆ ಸದ್ದು ಮಾಡಿತ್ತು. ಏಕೆಂದರೆ, ಆಕೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾಳೆ ಎಂದು ಸುದ್ದಿಯಾಗಿತ್ತು. ಎಲ್ಲೆಡೆ ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ..? ಅದು ಬರಬಾರದು ಅಂದ್ರೆ ನಾವು ಏನು ಮಾಡಬೇಕು..? ಹೀಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಈ ರೀತಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಲಿ ಎಂಬ ಕಾರಣಕ್ಕೆ ನಾನು ಸತ್ತುಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದೆ. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪೂನಂ ಪಾಂಡೆ ಇಂಡು ವೀಡಿಯೋ ಮಾಡಿ, ತನ್ನ ಇನ್‌ಸ್ಟಾ ಗ್ರಾಮ್ ಅಕೌಂಟ್‌ನಲ್ಲಿ ವೀಡಿಯೋ ಮಾಡಿದ್ದರು. ಕ್ಷಮೆಯೂ ಕೇಳಿದ್ದರು.
ಇದೀಗ ಈಕೆಯ ಈ ಗಿಮಿಕ್‌ಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಜಾಗೃತಿ ಮೂಡಿಸುವುದಿದ್ದರೆ, ಬೇರೆ ರೀತಿಯಿಂದಲೂ ಮೂಡಿಸಬಹುದಿತ್ತು. ಈ ರೀತಿ ಸಾವಿನ ಸುದ್ದಿ ಹರಡಿಸಿ ಅಲ್ಲ. ಈಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನಾನು ಬದುಕಿದ್ದೇನೆ ಎಂದು ಶಾಕ್ ನೀಡಿದ ನಟಿ ಪೂನಂ ಪಾಂಡೆ: ವೀಡಿಯೋ ವೈರಲ್