ಕೋಲಾರ: ಹಾಲಿ ಶಾಸಕ ಶ್ರೀನಿವಾಸಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಕೆಎಚ್ ಮುನಿಯಪ್ಪ ಬಣದಿಂದ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು , ಎಸ್ಸಿ ಎಸ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.
ಹುಬ್ಬಳ್ಳಿಯಲ್ಲಿ “ಬನಾರಸ್” ಚಿತ್ರದ ಪ್ರೀ ರಿಲೀಸ್ ಇವೆಂಟ್: ಇವೆಂಟ್‌ಗೆ ಬರಲಿದ್ದಾರೆ ದರ್ಶನ್!
ಶಾಸಕ ಶ್ರೀನಿವಾಸಗೌಡ ಜೆಡಿಎಸ್ ನಿಂದ ಗೆದ್ದು ರಮೇಶ್ ಕುಮಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು, ರಮೇಶ್ ಕುಮಾರ್ ಬಣದ ವಿರುದ್ದ ಕೆಎಚ್ ಮುನಿಯಪ್ಪ ಬಣದವರು ಗುಡುಗಿದ್ದಾರೆ. ಎಮ್ ಎಲ್ ಸಿ ಅನಿಲ್ ಕುಮಾರ್ ತಮ್ಮ ಪರದಿಯಲ್ಲಿ ಇರಬೇಕು, ಕೋಲಾರ ಕಾಂಗ್ರೆಸ್ ಟಿಕೆಟ್ ವಿಚಾರ ಅನವಶ್ಯಕ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಕೋಲಾರ ವಿದಾನಸಭೆ ಕಾಂಗ್ರೆಸ್ ಟಿಕೆಟ್ ಮೇಲೆ ಹಿಡಿತ ಸಾಧಿಸಲು ಕೆಎಚ್ ಮುನಿಯಪ್ಪ ಬಣ ಹಾಗೂ ರಮೇಶ್ ಕುಮಾರ್ ಬಣದ ನಡುವೆ ತಿಕ್ಕಾಟ ನಡೆದಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರ ಕಸರತ್ತಿನ ನಡುವೆಯೂ ಕೋಲಾರ ಬಣ ರಾಜಕೀಯ ಮುಂದುವರಿದಿದೆ.

