International News: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ನಡೆಯುತ್ತಿದ್ದು, ಸಾವು ನೋವುಗಳು ಸಂಭವಿಸಿದೆ. ಆದರೂ ಕೂಡ 57 ಮುಸ್ಲಿಂ ರಾಷ್ಟ್ರಗಳು ಒಟ್ಟಿಗೆ ಸೇರಲಿವೆಯಂತೆ. ಆದರೆ ಇದಕ್ಕೊಂದು ಉತ್ತಮ ಕಾರಣವಿದೆ ಎಂಬ ಮಾಹಿತಿ ಇದೆ.
ಪ್ರಸ್ತುತ ಅಧ್ಯಕ್ಷ ಸೌದಿ ಅರೇಬಿಯಾದ ಆಹ್ವಾನದ ಮೇರೆಗೆ ನವೆಂಬರ್12ರಂದು ರಿಯಾದ್‌ನಲ್ಲಿ 57 ಇಸ್ಲಾಮಿಕ್ ರಾಷ್ಟ್ರಗಳ, ಶೃಂಗಸಭೆ ನಡೆಸಲಾಗುತ್ತಿದೆ. ಈ ಸಮ್ಮೇಳನದ ಉದ್ದೇಶವೆನಂದ್ರೆ, ಗಾಜಾದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ. ಆಕ್ರಮಣದ ಬಗ್ಗೆ ಒಗ್ಗಟ್ಟಿನ ನಿಲುವು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಶೃಂಗಸಭೆ ನಡೆಸಲಾಗುತ್ತಿದೆ.
ಇನ್ನು ಈ ನಾಯಕರೆಲ್ಲ ಒಟ್ಟಾಗಿ ಸೇರಿ, ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸಲು, ಮುತ್ತಿಗೆಯನ್ನು ತೆಗೆದು ಹಾಕಲು, ವಿಧ್ವಂಸಕ ಕೃತ್ಯಗಳನ್ನು ನಿಲ್ಲಿಸಲು,ಒಗ್ಗಟ್ಟಾಗಿ ನಿರ್ಧರಿಸಿ, ಈ ಬಗ್ಗೆ ಇಸ್ರೇಲ್ ಪಕ್ಷಗಳಿಗೆ ಒತ್ತಾಯಿಸುವ ಸಾಧ್ಯತೆ ಇದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಿ, ಪ್ಯಾಲೇಸ್ತೇನಿಯರನ್ನು ರಕ್ಷಿಸುವುದು ಇವರ ಮೂಲ ಉದ್ದೇಶವಾಗಿದೆ.
ಈ ಮೊದಲು ಪ್ಯಾಲೇಸ್ತಿನ್ ಬಗ್ಗೆ ಸೌದಿ ಅರೇಬಿಯಾ ಭವಿಷ್ಯ ನುಡಿದಿತ್ತು. ಈ ನಗರಗಳು ಅಳಿವಿನ ಅಂಚಿನಲ್ಲಿದೆ. ಇಲ್ಲಿ ಯಾವಾಗ ಬೇಕಾದರೂ ದಾಳಿಯಾಗಬಹುದು ಎಂದು ಹೇಳಿತ್ತು.. ಮೊದಲೇ ಎಚ್ಚೆತ್ತುಕೊಳ್ಳಬೇಕೆಂದು ಎಚ್ಚರಿಕೆ ಕೂಡ ನೀಡಿತ್ತು.ಇದೀಗ ಶೃಂಗಸಭೆ ಕರೆದಿದ್ದು ಕೂಡ, ಗಾಜಾವನ್ನು ರಕ್ಷಿಸಲು ಎಂದು ಅಂದಾಜಿಸಲಾಗಿದೆ.
ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು
ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಇಸ್ರೇಲ್, ರಾಕೇಟ್ ಧ್ವಂಸ, ಹಲವರ ಸಾವು