Monday, December 23, 2024

Latest Posts

Delhiಯಲ್ಲಿ ಇಂದು 27,561 ಹೊಸ ಕೋವಿಡ್ ಪ್ರಕರಣಗಳು ಪತ್ತೆ..!   

- Advertisement -

ದೆಹಲಿ : ಇಂದು ದೆಹಲಿಯಲ್ಲಿ 27561 ಹೊಸ ಕೋರೊನಾ ಪ್ರಕರಣಗಳು(New corona cases) ಪತ್ತೆಯಗಿದ್ದು, ಕಳೆದ 24 ಗಂಟೆಗಳಲ್ಲಿ ಶೇಕಡಾ 29ರಷ್ಟು ಹೆಚ್ಚಾಗಿದೆ. ಇನ್ನು ಕೊರೋನಾ ದಿಂದ 40 ಜನ ಸಾವನ್ನಪ್ಪಿದ್ದಾರೆ. ಇನ್ನು ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳು 87,445 ರಷ್ಟಿದೆ. 25,240 ಕೊರೋನಾ ರೋಗಿಗಳು  ಹೋಂ ಐಸೋಲೇಷನ್(Home Isolation) ನಲ್ಲಿ ಇದ್ದಾರೆ. ಕಳೆದ 24 ಗಂಟೆಗಳಲ್ಲಿ 1,05,102 ಪರೀಕ್ಷೆಗಳನ್ನು ನಡೆಸಲಾಗಿದೆ. ಅವುಗಳಲ್ಲಿ 85,349 ಆರ್‌ಟಿ-ಪಿಸಿಆರ್(RTPCR) ಪರೀಕ್ಷೆಗಳು, 19,753 ಪ್ರತಿಜನಕ ಪರೀಕ್ಷೆಗಳಾಗಿವೆ. ಮೀಸಲಾದ ಕೋವಿಡ್ ಆಸ್ಪತ್ರೆಗಳಲ್ಲಿ ಸುಮಾರು 2,363 ರೋಗಿಗಳು ದಾಖಲಾಗಿದ್ದು, ಅವರಲ್ಲಿ2,264 ಮಂದಿ ಕೋವಿಡ್ ರೋಗಿಗಳು ಮತ್ತು 99 ಮಂದಿ ಕೋವಿಡ್ ಶಂಕಿತರು(Covid suspected) ಎಂದು ದೃಢಪಟ್ಟಿದ್ದಾರೆ. ಮೀಸಲಾದ ಕೋವಿಡ್ ಆಸ್ಪತ್ರೆಗಳಲ್ಲಿನ(Covid hospitals) 14,802 ಹಾಸಿಗೆಗಳಲ್ಲಿ, 2363 ರೋಗಿಗಳು ದಾಖಲಾಗಿದ್ದಾರೆ. ಮತ್ತು 12,439 ಹಾಸಿಗೆಗಳು ಖಾಲಿ ಇವೆ.

- Advertisement -

Latest Posts

Don't Miss