ದೇವರಾಜ್ ಹಾಗೂ ಉಮಾಶ್ರೀಯ ಹೊಸದೊಂದು ಚಿತ್ರ ಸ್ಯಾಂಡಲ್ವುಡ್ ನಲ್ಲಿ ಬರಲು ತಯಾರಾಗ್ತಿದೆ.

www.karnatakatv.net: ಬೆಂಗಳೂರು: ಡೈನಮಿಕ್ ಹೀರೋ ದೇವರಾಜ್ ಹಾಗೂ ಉಮಾಶ್ರೀ ಮುಖ್ಯ ಭೂಮಿಕೆಯ ಹೊಸದೊಂದು ಚಿತ್ರ ಸ್ಯಾಂಡಲ್ವುಡ್ ನಲ್ಲಿ ಬರಲು ತಯಾರಾಗ್ತಿದೆ.

ಇಂದು ಪೂಜೆ ನೆರವೇರಿಸುವ ಚಿತ್ರತಂಡ ಈ ಚಿತ್ರಕ್ಕೆ ” ಮಾನ ” ಎಂಬ ಶೀರ್ಷಿಕೆ ಇಡಲಾಗಿದೆ. ದೇವರಾಜ್, ಕೆ.ಮಂಜು, ನಿರ್ದೇಶಕ ಡೇವಿಡ್ ನಿರ್ಮಾಪಕರಾದ ರಮೇಶ್ ಬಾಬು ಮತ್ತು ಕಾಂತಲಕ್ಷ್ಮಿ ಉಪಸ್ಥಿತರಿದ್ದರು. ಇದು ನೈಜ ಘಟನೆಯಾದಾರಿತ ಕಥೆಯಾಗಿದೆ. ದೇವರಾಜ್ ಅವರನ್ನೇ ಇಟ್ಟುಕೊಂಡು ಈ ಚಿತ್ರವನ್ನು ಮಾಡಬೇಕೆಂದು ಕೊoಡಿದ್ದ ನಿರ್ದೇಶಕ ಡೇವಿಡ್, ಹಾಸ್ಯಮಯ ಮತ್ತು ಸೆಂಟಿಮೆoಟ್ ಕಾನ್ಸೆಪ್ಟ್ ನಲ್ಲಿ ಜೀತದ ವಿರುದ್ದವಾಗಿ ಕಥೆ ಮೂಡಿಬರಲಿದೆ ಹಾಗೂ, ಈ ಚಿತ್ರವು 70 – 80ರ ದಶಕದಲ್ಲಿ ಮೈಸೂರು – ಮಂಡ್ಯ ಶೈಲಿಯ ರೀತಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ ಮತ್ತು ಇದೆ ತಿಂಗಳಿನ 18ನೇ ತಾರಿಕಿನಿಂದ ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ರೂಪೇಶ್, ಫಿಲಂ ಬ್ಯೂರೋ- ಕರ್ನಾಟಕ ಟಿವಿ

About The Author