Dharwad News: ಕುಂದಗೋಳ: ಭಕ್ತಿ ಸಂಗೀತಕ್ಕೆ ಮನಸುಗಳನ್ನು ಜೋಡಿಸುವ ಶಕ್ತಿ ಇದೆ. ನಮ್ಮ ಮೂಲ ಸಂಗೀತವನ್ನು ನಾವು ಎಂದಿಗೂ ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸವಾಯಿ ಗಂಧರ್ವರ 71ನೇ ಪುಣ್ಯಸ್ಮರಣೆ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ವಿದ್ಯೆ ಕಲಿಯಬೇಕಾದರೆ ಗುರುವಿಗೆ ಸೇವೆ ಸಲ್ಲಿಸಿ ಜ್ಞಾನ ಪಡೆಯುತ್ತಿದ್ದರು. ಕುಂದಗೋಳ ನಾಡಗೇರ ವಾಡೆಯು ಶಾರದೆಯ ನೆಲೆಯಾಗಿದ್ದು ನಾಡಗೇರ ಅವರು ನಿಜಕ್ಕೂ ಸಂಗೀತ ಲೋಕಕ್ಕೆ ಅನೇಕ ಮಾಣಿಕ್ಯ ನೀಡಿದ್ದಾರೆ ಎಂದರು.
ಸಮಿತಿ ಅಧ್ಯಕ್ಷ ಅರವಿಂದ ಕಟಗಿ ಮಾತನಾಡಿ, 71 ವರ್ಷ ಗುರುವರ್ಯರ ಸಂಗೀತ ಮಹೋತ್ಸವವನ್ನು ಎಲ್ಲ ಸದಸ್ಯರು ಹಾಗೂ ಅನೇಕರ ಸಹಕಾರದೊಂದಿಗೆ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಸಂಗೀತೋತ್ಸವ ಹಮ್ಮಿಕೊಂಡಿರುವುದು ನಮ್ಮೆಲ್ಲರ ಭಾಗ್ಯ. ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಸವಾಯಿ ಗಂಧರ್ವ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಸಂಗೀತ ಗಾಯಕ ರಾಜಾ ಕಾಳೆ ಅವರಿಗೆ ಶಾಸಕ ಎಂ. ಆರ್. ಪಾಟೀಲ ಪ್ರದಾನ ಮಾಡಿ ಗೌರವಿಸಿದರು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕುಮಾರ ಬೆಕ್ಕೇರಿ, ಅರ್ಜುನ ನಾಡಗೇರ, ಉಮೇಶ ಹೆಬಸೂರ, ಆರ್.ಐ ಬ್ಯಾಹಟ್ಟಿ, ಜಿತೇಂದ್ರ ಕುಲಕರ್ಣಿ, ಮುತ್ತಣ್ಣ ತಡಸೂರ, ಇತರರಿದ್ದರು.
ಚಿನ್ನಾಭರಣ ತೊಳೆದು ಕೊಡುವುದಾಗಿ ಹೇಳಿ 1.45 ಲಕ್ಷ ರೂ. ಮೌಲ್ಯದ ಆಭರಣ ಎಗರಿಸಿದ ಖದೀಮರು
ಹಾಸನ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಕರವೇ ಒತ್ತಾಯ
ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ನಾಯಕರಿಂದ ಪ್ರೊಟೆಸ್ಟ್