Dhaka News: ಶೇಖ್ ಹಸೀನಾ ವಿರೋಧಿ ಪಾರ್ಟಿಯಾಗಿದ್ದ ರಾಷ್ಟ್ರೀಯ ನಾಗರಿಕ ಪಕ್ಷ ಆಯೋಜಿಸಿದ್ದ ಬೃಹತ್ ರ್ಯಾಲಿ ವೇಳೆ ಸ್ಪೋಟ ಸಂಭವಿಸಿ, ಮೂವರು ಗಾಯಗ“ಂಡಿರುವ ಘಟನೆ ಢಾಕಾದಲ್ಲಿ ನಡೆದಿದೆ.
ಢಾಕಾದ ಸಾವರ್ ಪ್ರದೇಶದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು. ಎನ್ಸಿಪಿ ನಾಯಕರ“ಬ್ಬರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರು. ಈ ವೇಳೆ ಸ್ಪೋಟ ಸಂಭವಿಸಿದ್ದು, ಸ್ಪೋಟದ ಶಬ್ದಕ್ಕೆ ಬೆದರಿ, ಅಲ್ಲಿ ಬಂದವರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಮೂರು ಜನರಿಗೆ ಗಾಯವಾಗಿದ್ದು, ಇನ್ನೂ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಳೆದ 2 ವರ್ಷಗಳ ಹಿಂದೆ ವಿದ್ಯಾರ್ಥಿಗಳೆಲ್ಲ ಸೇರಿ, ಶೇಖ್ ಹಸೀನಾ ವಿರುದ್ಧ ಪ್ರತಿಭಟನೆ ಮಾಡಿ, ಆಕೆಯನ್ನು ದೇಶದಿಂದ ಓಡಿಸಿದ್ದರು. ಆಕೆಯ ಮನೆಯ ಮೇಲೆ ದಾಳಿ ಮಾಡಿ, ಅಲ್ಲಿದ್ದ ಎಲ್ಲ ವಸ್ತುವನ್ನೂ ಲೂಟಿ ಮಾಡಿದ್ದರು. ಈ ಘಟನೆ ನಡೆದು ಇಂದಿಗೆ 2 ವರ್ಷವಾಗಿದೆ. ಹಾಗಾಗಿ ಇದರ ವಾರ್ಷಿಕೋತ್ಸವ ಆಚರಿಸುತ್ತಿದ್ದ ವೇಳೆ ಈ ಸ್ಪೋಟ ಸಂಭವಿಸಿದೆ.
ಇದು ಉದ್ದೇಶಪೂರ್ವಕವಾಗಿ ಆದ ಸ್ಪೋಟವೋ ಅಥವಾ, ಬೇಕಂತಲೇ ಮಾಡಿದ ಸ್ಪೋಟವೋ ಎಂಬುದು ಪೋಲೀಸರ ತನಿಖೆಯಿಂದ ತಿಳಿಯಬೇಕಿದೆ. ಸದ್ಯ ಸ್ಪೋಟದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೃಪೆ: ಎಎನ್ಐ
#WATCH | Dhaka, Bangladesh: A reported bomb explosion occurred in Savar, near Dhaka, during a rally organised by the newly formed National Citizen Party (NCP), injuring at least three people.
The march marks the second anniversary of the student protests against former… pic.twitter.com/XbrsqDErE9
— ANI (@ANI) July 6, 2026




