Recipe: ಬೇಕಾಗುವ ಸಾಮಗ್ರಿ: 1ಕಪ್ ರಾತ್ರಿಯಿಡೀ ನೆನೆಸಿದ ಕಡಲೆ, 1 ಕಪ್ ಸೋಯಾ ಚಂಕ್ಸ್, 1 ಈರುಳ್ಳಿ, ಅರಶಿನ, ಗರಂ ಮಸಾಾಲೆ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಕೊತ್ತೊಂಬರಿ ಸೊಪ್ಪು, ಜಿಂಜರ್-ಗಾರ್ಲಿಕ್ ಪೇಸ್ಟ್, 2 ಹಸಿಮೆಣಸು, 1 ಸ್ಪೂನ್ ಜೀರಿಗೆ, ಎಣ್ಣೆ, 1 ಟೋಮೆಟೋ ಪೆಸ್ಟ್, ಕಸೂರಿ ಮೇಥಿ, ಉಪ್ಪು.
ಮಾಡುವ ವಿಧಾನ: ನೆನೆಸಿದ ಕಡಲೆಗೆ ಸ್ವಲ್ಪ ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿ, ಕುಕ್ಕರ್‌ನಲ್ಲಿ ಬೇಯಿಸಿ. ಕುದಿಸಿದ ನೀರಿಗೆ ಸೋಯಾ ಚಂಕ್ಸ್ ಹಾಕಿ 5 ನಿಮಿಷ ನೆನೆಸಿ ಬಳಿಕ ನೀರು ಬಸಿದು ಬದಿಗಿರಿಸಿ.
ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಜೀರಿಗೆ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಜಿಂಜರ್ ಗಾರ್ಲಿಕ್ ಪೇಸ್ಟ್, ಹಸಿಮೆಣಸು ಹಾಕಿ ಮತ್ತೆ ಹುರಿಯಿರಿ. ಬಳಿಕ ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಸ್ವಲ್ಪ ಅರಿಶಿನ ಹಾಕಿ, ಅವಶ್ಯಕತೆ ಇದ್ದರೆ ಉಪ್ಪು ಹಾಕಿ ಮತ್ತೆ ಮಿಕ್ಸ್ ಮಾಡಿ.
ಬೇಕಾದ್ದಲ್ಲಿ, ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಸೇರಿಸಬಹುದು. ಬಳಿಕ ಟೋಮೆಟೋ ಪ್ಯೂರಿ ಸೇರಿಸಿ. 2 ನಿಮಿಷ ಬೆಂದ ಬಳಿಕ, ಬೇಯಿಸಿದ ಕಡಲೆ ಮತ್ತು ಅವಶ್ಯಕತೆ ಇದ್ದಷ್ಟು ಅದರ ನೀರು ಮತ್ತು ನೆನೆಸಿದ್ದ ಸೋಯಾ ಚಂಕ್ಸ್ ಹಾಕಿ ಮಿಕ್ಸ್ ಮಾಡಿ.
ಬಳಿಕ , ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿ 2 ನಿಮಿಷ ಮುಚ್ಚಳ ಮುಚ್ಚಿ ಕುದಿಸಿದರೆ ಸೋಯಾ-ಕಡಲೆ ಛೋಲೆ ರೆಡಿ.




