Mysuru News: ಗಣಪತಿ ಹಬ್ಬಕ್ಕೂ ಮುಂಚೆ ಪೋಲೀಸ್ ಅಧಿಕಾರಿ ಧನಂಜಯ್ ಅವರು, ಮಸೀದಿ ಮುಂದೆ ಮೆರವಣಿಗೆ ಹೋದರೆ, ಗ್ರಹಚಾರ ಬಿಡಿಸುತ್ತೇನೆ ಎಂದು ಹಿಂದೂಗಳಿಗೆ ಹೇಳಿರುವ ವೀಡಿಯೋ ವೈರಲ್ ಆಗಿತ್ತು. ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ನಾಯಕರು ಕೂಡ ಧನಂಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದೀಗ ಆ ವೀಡಿಯೋ ವೈರಲ್ ಮಾಡಿರುವ ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಲಾಗಿದೆ. ವೀಡಿಯೋದಲ್ಲಿ ಹೇಳಿಕೆ ತಿರುಚಿ ಅಪ್ಲೋಡ್ ಮಾಡಿದ್ದಾರೆಂದು ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿರುವ ಯೂಟ್ಯೂಬರ್ ಮಂಜು, ಧನಂಜಯ್ ಹೇಗೆ ಹೇಳಿದ್ದರೋ, ಅದೇ ರೀತಿ ನಾನು ಅಪ್ಲೋಡ್ ಮಾಡಿದ್ದೇನೆ. ನನ್ನ ವೀಡಿಯೋ ಮಾಡಿ, ಅಪ್ಲೋಡ್ ಮಾಡಿ ಎಂದು ಧನಂಜಯ್ ಅವರೇ ಹೇಳಿದ್ದರು. ಹಾಗಾಗಿ ನಾನು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದು ಎಂದು ಮಂಜು ಹೇಳಿದ್ದಾರೆ.
ಅಲ್ಲಿನ ಪೇದೆಯಾಗಿದ್ದ ಯಶ್ವಂತ ಅವರ ಮೂಲಕ ತನ್ನನ್ನು ಸ್ಟೇಶನ್‌ಗೆ ಕರೆಸಿಕ“ಂಡು ಗಣಪತಿ ವಿಸರ್ಜನೆ ಬಗ್ಗೆ ಮಾತನಾಡುತ್ತೇನೆ ವೀಡಿಯೋ ಮಾಡಿ, ಯೂಟ್ಯೂಬ್‌ಗೆ ಹಾಕು ಎಂದು ಧನಂಜಯ್ ಅವರೇ ನನಗೆ ಹೇಳಿದ್ರು. ಇದೀಗ ತಾವು ನೀಡಿದ ಹೇಳಿಕೆ ಮುಚ್ಚಿ ಹಾಕಲು ತಮ್ಮ ಮೇಲೆ ಎಫ್‌ಐಆರ್ ಹಾಕಿದ್ದಾರೆ ಎಂದು ಮಂಜು ಗಂಭೀರ ಆರೋಪ ಮಾಡಿದ್ದಾರೆ.




