Bhatkala News: ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಮಸೀದಿಯ ಗಾಜು ಪುಡಿ ಪುಡಿ

Bhatkala News: ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಮಸೀದಿಯ ಗಾಜು ಪುಡಿ ಪುಡಿಯಾಗಿದೆ. ಸ್ಥಳದಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದ್ದು. ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇಲ್ಲಿನ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಇಸ್ಮಾಯಿಲ್ ಸುನ್ನಿ ಜಾಮಿಯಾ ಮಸೀದಿ ಮತ್ತು ತಾಜುಸುನ್ನಾ ಅರೇಬಿಕ್ ಮದರಸಾಗಳ ಮೇಲೆ ಕಲ್ಲ ತೂರಾಟ ನಡೆಸಿದ್ದಾರೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ, ಹಲವು ಮುಸ್ಲಿಂರು ಭಟ್ಕಳ ಪೋಲೀಸ್ ಸ್ಟೇಶನ್‌ ಬಳಿ ಜಮಾಯಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣ ಗಂಭೀರ ಕ್ರಮ ಕೈಗ“ಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳೀಯ ನಿವಾಸಿ ಅಬ್ದುಲ್ ಅಲೀಂ ಮತ್ತು ಶಾಹುಲ್ ಅಮೀನ್ ಗವಾಯಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೇ ಘಟನೆ ಸಂಬಂಧ ಕೆಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಕರೆಸಿ, ವಿಚಾರಣೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲಾಗಿದೆ.

About The Author