ಸ್ಯಾಂಡಲ್ ವುಡ್‌ನ ಸಂಗೀತ ಸಂಯೋಜಕ, ರ್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಈ ಬಾರಿ ಅವರು ನೀಡಿದ ಹೇಳಿಕೆ ಫ್ಯಾನ್ಸ್‌ನಲ್ಲಿ ಹೊಸ ಕುತೂಹಲ ಮೂಡಿಸಿದೆ.
ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ, ಈಗ ಚಂದನ್ ಶೆಟ್ಟಿ ಎರಡನೇ ಮದುವೆ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, “ಮದುವೆ ಖಂಡಿತ ಆಗುತ್ತೇನೆ… ಆದರೆ ಈ ವರ್ಷ ಅಲ್ಲ!” ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದಾರೆ.
“ಒಳ್ಳೆಯ ಹುಡುಗಿ ಸಿಕ್ಕರೆ ಮುಂದಿನ ವರ್ಷ ಮದುವೆಯಾಗುತ್ತೇನೆ. ಇನ್ನೂ ಹುಡುಗಿ ನೋಡೋ ಪ್ರಕ್ರಿಯೆ ಶುರು ಆಗಿಲ್ಲ. ಆದರೆ ನನಗೆ ಮುಖ್ಯವಾದುದು ಒಂದೇ—ವೈಬ್ ಮ್ಯಾಚ್ ಆಗಬೇಕು!” ಎಂದು ನಗುತ್ತಲೇ ಹೇಳಿದ್ದಾರೆ ಚಂದನ್.
ಅವರ ಈ ಮಾತು ಕೇಳಿದ ಫ್ಯಾನ್ಸ್, “ಯಾರು ಆ lucky girl?” ಎಂದು ಈಗಲೇ ಊಹಾಪೋಹ ಶುರು ಮಾಡಿದ್ದಾರೆ. 2027ರ ವೇಳೆಗೆ ಚಂದನ್ ಮತ್ತೆ ಹಸೆಮಣೆ ಏರುವ ಸಾಧ್ಯತೆ ಇದೆ ಎಂಬ ಮಾತು ಸ್ಯಾಂಡಲ್ ವುಡ್‌ನಲ್ಲಿ ಸಖತ್ ಸುದ್ದಿಯಾಗ್ತಿದೆ.
ಇನ್ನು, Bigg Boss Kannada ವೇದಿಕೆಯಲ್ಲಿ ಆರಂಭವಾದ ಚಂದನ್–ನಿವೇದಿತಾ ಪ್ರೀತಿ, ಮದುವೆಯಾಗಿ ಕೆಲ ವರ್ಷಗಳ ನಂತರ ಅಂತ್ಯ ಕಂಡಿತ್ತು. ಹೊಂದಾಣಿಕೆ ಸಮಸ್ಯೆಯಿಂದ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರವಾದರು. ಆದರೆ, ಈಗ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ.




