Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ನಟಿ ರನ್ಯಾ ರಾವ್ ರಿಲೀಸ್..

Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಜೈಲಿಗೆ ಹೋಗಿ 1 ವರ್ಷ ಆಯ್ತು. ಆದ್ರೆ ಇದೀಗ ರನ್ಯಾಗೆ ಜಾಮೀನು ಸಿಕ್ಕಿದ್ದು, ಇಂದು ರನ್ಯಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

102 ಕೋಟಿ ರೂಪಾಯಿ ಮೌಲ್ಯದ 100 ಕೆಜಿಗಿಂತಲೂ ಹೆಚ್ಚು ಚಿನ್ನವನ್ನು ರನ್ಯಾರಾವ್ ಅಕ್ರಮವಾಗಿ ಸಾಗಿಸಿ, ಸಿಕ್ಕಿಬಿದ್ದಿದ್ದರು. ತನ್ನ ತಂದೆ ಪೋಲೀಸ್ ಅಧಿಕಾರಿ ಎಂದು ಹೇಳಿ, ಈಕೆ ಎಷ್ಟೋ ಬಾರಿ ಏರ್‌ಪೋರ್ಟ್‌ನಿಂದ ಆರಾಮವಾಗಿ ಎಸ್ಕೇಪ್ ಆಗಿ ಬಂದಿದ್ಲು. ಆದರೆ ಹಣೆಬರಹಗೆಟ್ಟು ಕಳೆದ ವರ್ಷ ದುಬೈನಿಂದ ಭಾರತಕ್ಕೆ ಬರುವಾಗ, ಏರ್ಪೋರ್ಟ್‌ನಲ್ಲಿ ಚೆಕ್ ಮಾಡುವ ವೇಳೆ ಸಿಕ್ಕಿಬಿದ್ದಿದ್ದಳು.

ಈ ವೇಳೆ ಈಕೆಯ ಮೇಲೆ ಅಕ್ರಮ ಚಿನ್ನ ಸಾಗಾಣೆ ಕೇಸ್ ಹಾಕಿ, ಜೈಲಿಗೆ ಹಾಕಲಾಗಿತ್ತು. ಆದರೆ ಆಗಲೇ ಆಕೆಗೆ ಜಾಮೀನು ಸಿಕ್ಕಿತ್ತು. ಆದರೆ ವಿದೇಶದಿಂದ ಅಕ್ರಮ ಚಿನ್ನ ಸಾಗಾಣೆ ಮಾಡಿದ್ದಕ್ಕಾಗಿ, ಈಕೆಯ ಮೇಲೆ ಕಾಫಿಫೋಸಾ ಎಂಬ ಕೇಸ್ ಹಾಕಿ, 1 ವರ್ಷ ಜೈಲಲ್ಲೇ ಇರಿಸಲಾಗಿತ್ತು. ಈಗ ಅದರ ಅವಧಿ ಮುಗಿದಿದ್ದು, ಜಾಮೀನಿನ ಸಹಾಯದಿಂದ ರನ್ಯಾ ಆಚೆ ಬಂದಿದ್ದಾರೆ.

About The Author