Sunday, September 8, 2024

Latest Posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು

- Advertisement -

Dharwad News: ಧಾರವಾಡ : ರಾಯಾಪೂರದಲ್ಲಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಕಳ್ಳತನ ಪ್ರರಕಣಕ್ಕೆ ಸಂಬಂಧಿಸಿದಂತೆ, ೧೦ ಜನರನ್ನು ಬಂಧಿಸಲಾಗಿದೆ ಎಂದು ಅವಳಿ ನಗರ ಪೊಲೀಸ್ ಆಯಕ್ತರಾದ ರೇಣುಕಾ ಸುಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರ, ನವಲಗುಂದದ ಬಸವರಾಜ ಶೇಖಪ್ಪ ಬಾಬಜಿ, ಜಿಲಾನಿ ಬವರಸಾಬ ಜಮಾದಾರ, ಪರಶುರಾಮ ಹನಮಂತಪ್ಪ ನೀಲಪ್ಪಗೌಡರ, ಮಹಾಂತೇಶ ಲಕ್ಷ್ಮಣ ಹಿರಗಣ್ಣವರ, ರಂಗಪ್ಪ ನಾಗಪ್ಪ ಗುಡಾರದ, ಮಂಜುನಾಥ ಯಮನಪ್ಪ ಬೋವಿ, ಕಿರಣ ಶರಣಪ್ಪ ಕುಂಬಾರ, ರಜಾಕಅಹ್ಮದ ಅಲ್ಲಾವುದ್ದೀನ್ ಮುಲ್ಲಾನವರ ಮತ್ತು ವೀರೇಶ ಸಿದ್ದಪ್ಪ ಚವಡಿ ಬಂಧಿತ ಆರೋಪಿಗಳು.

ಬಂಧಿತರಿಂದ ಕಳ್ಳತನ ಮಾಡಿದ್ದ ೧,೨೪,೪೮,೦೮೭ ರೂಪಾಯಿಗಳ ಪೈಕಿ ೭೯,೮೯,೮೭೦ ನಗದು ಜಪ್ತಿ ಮಾಡಲಾಗಿದೆ. ಜೊತೆಗೆ ಕಳ್ಳತನಕ್ಕೆ ಬಳಸಿದ್ದ ೧ ಕಾರು, ೨ ಬೈಕ್ ಮತ್ತು ೪ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಳೆದ ದಿ.೨೪ ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟನ ಪ್ರಾದೇಶಿಕ ಕಛೇರಿಯಲ್ಲಿ ಇಡಲಾಗಿದ್ದ ಸೇಫ್ಟಿ ರೂಮಿನ ಕೀಲಿ ಮುರಿದು ಒಳಪ್ರವೇಶಿಸಿ, ಸೇಪ್ಪಿ ಲಾಕರಗಳನ್ನು ಆಯುಧಗಳಿಂದ ಮೀಟಿ ಅದರಲ್ಲಿದ್ದ ಒಟ್ಟು ನಗದು ಹಣ ೧.೨೪.೪೮.೦೮೭ ಕಳುವು ಮಾಡಿದ್ದರು. ನಂತರ ಪೊಲೀಸರಿಗೆ ನೀಡಿದ ದೂರಿನ ಅನ್ವಯ ನಡೆದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.

ಆರೋಪಿಗಳ ಪೈಕಿ ಕಿರಣ ಶರಣಪ್ಪ ಕುಂಬಾರ ಮುಖ್ಯ ಸೂತ್ರದಾರ ಎನ್ನಲಾಗಿದ್ದು, ಬಂಧಿತರಾದ ಕುಶಾಲಕುಮಾರ ಸವಣೂರ ಕಚೇರಿಯ ನೌಕರ. ಇದೇ ರೀತಿ ಬಸವರಾಜ ಬಾಬಜಿ ಮತ್ತು ಮಹಾಂತೇಶ ಹಿರಗಣ್ಣವರ ಸಂಸ್ಥೆಯ ಸಿಬ್ಬಂದಿಯಾಗಿದ್ದಾರೆ. ಈ ಪ್ರಕರಣದಲ್ಲಿ ಕಳುವು ಮಾಡಿದ ಆರೋಪಿಗಳ ಹಾಗೂ ಕಳ್ಳತನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಎಸಿಪಿ ಪ್ರಶಾಂತ ಸಿದ್ದನಗೌಡರ ಅವರ ನೇತೃತ್ವದಲ್ಲಿ ಪಿ.ಐಗಳಾದ ಸಂಗಮೇಶ ದಿಡಿಗಿನಾಳರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಲಾಗಿತ್ತು. ಪಿಐಗಳಾದ ನಾಗೇಶ ಕಾಡದೇವರ, ಬಾಬಾ, ಎಂ, ಪಿಎಸ್‌ಐಗಳಾದ ಪ್ರಮೋದ, ಎಚ್.ಜಿ, ಎಂ. ಆರ್. ಮಲ್ಲಿಗವಾಡ, ಪಿ.ಎಸ್.ಐ, ಐ.ಐ. ಮದರಖಂಡಿ, ಸಿಬ್ಬಂದಿಗಳಾದ ಈರಣ್ಣ ಬುರ್ಜಿ, ಗಿರೀಶ ಚಿಕ್ಕಮಠ, ನಾಗರಾಜ ಗುಡಿಮನಿ, ಎಂ.ಸಿ.ಮಂಕಣಿ, ಬಿ.ಎಮ್. ಪಠಾತ, ಮಹಾಂತೇಶ, ವಾಯ್, ಎಂ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಗಿರೀಶ ಬಿದರಳ್ಳಿ, ವಿ.ಎಚ್. ಚವರಡ್ಡಿ, ಬಸವರಾಜ ಸವಣೂರ, ವಿ.ಎಸ್. ಕುದರಿ, ರಮೇಶ ಕೋತಂಬ್ರಿ, ಉಷಾ ಎಂ. ಎಚ್, ಮತ್ತಿತರರು ತನಿಖಾ ತಂಡದಲ್ಲಿದ್ದರು ಎಂದು ರೇಣುಕಾ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿ ರಾಜು ಎಂ., ಎಸಿಪಿ ಪ್ರಶಾಂತ ಸಿದ್ದನಗೌಡರ,ಪಿಐಗಳಾದ ಸಂಗಮೇಶ ದಿಡಿಗಿನಾಳ, ನಾಗೇಶ ಕಾಡದೇವರ ಮತ್ತಿತರರು ಉಪಸ್ಥಿತರಿದ್ದರು.

ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ

ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ: ರಾತ್ರೋ ರಾತ್ರಿ ಬೆಂಗಳೂರಿಗೆ ಬಂದ ಹೈಕಮಾಂಡ್ ನಾಯಕರು

ಬೊಮ್ಮನಹಳ್ಳಿಯ ಚಿರತೆ ಕಾರ್ಯಾಚರಣೆಗೆ ಶಾರ್ಪ್‌ಶೂಟರ್ಸ್‌ ಎಂಟ್ರಿ

- Advertisement -

Latest Posts

Don't Miss