Hubli News: ಎಸ್ ಐಟಿ ತನಿಖೆ ನೆಪದಲ್ಲಿ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆ ಕುಟುಂಬಸ್ಥ ವಿರುದ್ಧ ಅಪಪ್ರಚಾರ ಆರೋಪ ಮಾಡಿದ ಕಾರಣಕ್ಕೆ, ದ್ರಾವಿಡ್ ಬ್ರಾಹ್ಮಣರ ಸಂಘ ಮತ್ತು ಬಂಟರ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಅಪವಿತ್ರಗೊಳಿಸಲಾಗುತ್ತಿದೆಂದು ಆರೋಪಿಸಿ, ದ್ರಾವಿಡ್ ಬ್ರಾಹ್ಮಣರ ಸಂಘ ಮತ್ತು ಬಂಟರ ಸಂಘದಿಂದ, ಹಿಂದೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಸುಮ್ಮಖದಲ್ಲಿ ಬೃಹತ್ ಹೋರಾಟ ಮಾಡಲು ನಿರ್ಧರಿಸಲಾಗಿದೆ.
ಇದೇ 17 ರಂದು ಹುಬ್ಬಳ್ಳಿಯಲ್ಲಿ, ರೇಲ್ವೆ ನಿಲ್ದಾಣದಿಂದ ಚೆನ್ನಮ್ಮ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಮಾವೇಶ ನಡೆಸಬೇಕೆಂದು ನಿರ್ಧರಿಸಲಾಗಿದೆ. ಈ ವೇಳೆ ಇಂದಿರಾಗಾಂಧಿ ಗಾಜಿನ ಮನೆಯಲ್ಲಿ ನಡೆಲಿರುವ ಬಹಿರಂಗ ಸಮಾವೇಶದಲ್ಲಿ, ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಲಿದ್ದಾರೆ.
ಇನ್ನು ಇದೇ ವಿಚಾರವಾಗಿ, ಹುಬ್ಬಳ್ಳಿಯಲ್ಲಿ ದ್ರಾವಿಡ್ ಬ್ರಾಹ್ಮಣರ ಸಂಘ ಮತ್ತು ಬಂಟರ ಸಂಘದಿಂದ ಸುದ್ದಿಗೊಷ್ಠಿ ನಡೆಸಲಾಗಿತ್ತು. ಎಸ್ ಐ ಟಿ ತನಿಖೆ ನೆಪದಲ್ಲಿ ಧರ್ಮಸ್ಥಳದ ಕ್ಷೇತ್ರದ ಪಾವಿತ್ರ್ಯತೆ ಯನ್ನ ಹಾಳು ಮಾಡಲಾಗುತ್ತದೆ. ರಾಜ್ಯದಲ್ಲಿ ಒಂದು ವರ್ಗದ ಪರವಾಗಿ ದೂರು ಮತ್ತು ಎಫ್ ಐ ಆರ್ ಆಗುತ್ತಿವೆ. ಧರ್ಮ ಸ್ಥಳ ವಿಚಾರದಲ್ಲಿ ಇಲ್ಲ,ಸಲ್ಲಸ ಆರೋಪ ಮಾಡಿದವರನ್ನು ಸುಮ್ಮನೆ ಬಿಡೋದಿಲ್ಲಾ. ಎಸ್ ಐಟಿ ತನಿಖೆಯಲ್ಲಿ ಏನು ಆರೋಪ ಸಾಬೀತು ಆಗದಿದ್ದ್ರೆ. ಸುಮ್ಮನೆ ಸುಮ್ಮನೆ ಆರೋಪಿ ಮಾಡಿ ,ಧರ್ಮಸ್ಥಳ ವಿರುದ್ಧ ಅಪ್ರಚಾರ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೆವೆ. ನಮ್ಮ ಪ್ರಾಣ ಇರೋತನಕ ಬಿಡೋದಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ, ನಡೆಯಲಿ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ತನಿಖೆ ನಡೆಯುವ ಸಮಯದಲ್ಲಿ ಭಕ್ತರ ದಿಕ್ಕನ್ನು ತಪ್ಪಿಸಲಾಗುತ್ತಿದೆ. ಎಲ್ಲರಿಗೂ ಕಾನೂನು ಮೇಲೆ ಗೌರವವಿದೆ. ತನಿಖೆ ನಡೆಯುತ್ತಿದೆ, ತನಿಖೆ ನಂತ್ರ ಸತ್ಯ ಹೊರಬರಲಿದೆ. ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ಉಂಟಾಗಬಾರದು. ಕ್ಷೇತ್ರದ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದ ಹೆಸರನ್ನ ತೇಜೋವದೆ ಮಾಡುವುದು ದುರದೃಷ್ಟಕರ ಎಂದು ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ.

