Film news:
ಡಿಬಾಸ್ ದರ್ಶನ್ ಅವರಿಗೆ ಬಾಲ ನಟಿ ಅಂಕಿತಾ ಜಯರಾಮ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಡಿಬಾಸ್ ದರ್ಶನ್ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ತಿರಂಗ ರಾಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಚಾಲೆಂಜಿAಗ್ ಸ್ಟಾರ್ ದರ್ಶನ್ ಸ್ಟೇಜ್ ಮೇಲೆ ಇದ್ದಂತೆ, ಡಿಬಾಸ್ ಅವರನ್ನ ಆತ್ಮೀಯವಾಗಿ ನಟಿ ಅಂಕಿತಾ ಅಪ್ಪಿಕೊಂಡ್ರು..
ಈ ವೇಳೆ ದರ್ಶನ್ ಅವರಿಗೆ ಬಾಲ ನಟಿ ಅಂಕಿತಾ ಅವರು, ಭಾರತದ ಹೆಮ್ಮೆಯ ಲಾಂಛನವಿರುವ ಬ್ಯಾಡ್ಜ್ ಅನ್ನ ತೊಡಿಸಿದ್ರು. ಡಿಬಾಸ್ ಶರ್ಟ್ಗೆ ಬ್ಯಾಡ್ಜ್ ಹಾಕಿ, ಆತ್ಮೀಯವಾಗಿ ಮಾತ್ನಾಡಿದ್ರು. ವಿಶೇಷ ಅಂದ್ರೆ, ನಟಿ ಅಂಕಿತಾ, ಡಿಬಾಸ್ ದರ್ಶನ್ ಜೊತೆ ಕ್ರಾಂತಿ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ.
ಕೆಲವು ನಿಮಿಷಗಳ ಕಾಲ ಡಿಬಾಸ್ ಜೊತೆ ಮಾತನಾಡಿದ ಅಂಕಿತಾ, ದರ್ಶನ್ ಅವರಿಗೆ ಸನ್ಮಾನ ಮಾಡುವಾಗಲು ಜೊತೆಯಲ್ಲೇ ಇದ್ರು.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿ ಅಂಕಿತಾ ಅವರು ಡಿಬಾಸ್ ಜೊತೆಯಲ್ಲಿರೋ ಫೋಟೋ ಹಾಗೂ ವಿಡಿಯೋ ವೈರಲ್ ಆಗ್ತಿದೆ. ಸಖತ್ ಕ್ಯೂಟ್ ಆಗಿದ್ದಾರೆ ಅಂಕಿತಾ ಅಂತ ಕಾಮೆಂಟ್ ಗಳು ಇವೆ. ಜೊತೆಗೆ ಡಿಬಾಸ್ ಕೂಡ ತುಂಬಾ ಪ್ರೀತಿ ಹಾಗೂ ಆತ್ಮೀಯತೆಯಿಂದ ಅಂಕಿತಾ ಅವರನ್ನ ಮಾತ್ನಾಡಿಸಿದ್ದಾರೆ..
ಈ ಬಗ್ಗೆ ಬಾಲ ನಟಿ ಅಂಕಿತಾ ಕೂಡ ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಡಿಬಾಸ್ ಜೊತೆಗಿನ ಆತ್ಮೀಯ ಕ್ಷಣಗಳನ್ನ ಹಂಚಿಕೊAಡಿದ್ದು, ಡಿಬಾಸ್ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಲ್ಲದೆ, ಕ್ರಾಂತಿ ಸಿನಿಮಾದಲ್ಲಿ ಡಿಬಾಸ್ ಜೊತೆಯಲ್ಲಿ ಅಭಿನಯಿಸಿದ್ದು, ಚಿತ್ರೀಕರಣದ ಸಮಯದಲ್ಲಿ ಡಿಬಾಸ್, ನನಗೆ ತೋರುತ್ತಿದ್ದ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ಅಂತ ಅಂಕಿತಾ ಪೋಸ್ಟ್ ಮಾಡಿದ್ದಾರೆ.