Saturday, July 27, 2024

Latest Posts

ಸಿನಿಮಾಲೋಕದ ಫಟಾಫಟ್ ಸ್ಟೋರಿ

- Advertisement -

Film beat:

1.ರಕ್ಕಮ್ಮಗೆ ಬಂಧನ ಭೀತಿ..!: ಕಳೆದ ವರ್ಷದಿಂದಲೂ ಚರ್ಚೆಯಲ್ಲಿರುವ ವಂಚಕ ಸುಖೇಶ್ ಚಂದ್ರಶೇಖರ್‌ನ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದವನ್ನು ಇಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯೆಂದು ಇಡಿ ಪರಿಗಣಿಸಿದೆ.

2.ಸಾದುಕೋಕಿಲ ಸೋಷಿಯಲ್ ಮೀಡಿಯಾಗೆ ಎಂಟ್ರಿ: ಇಷ್ಟು ದಿನ ಸೋಷಿಯಲ್ ಮಿಡಿಯಾದಿಂದ ದೂರವೇ ಇದ್ದ ಕಾಮಿಡಿ ಕಿಂಗ್ ಸಾಧುಕೋಕಿಲ ಈಗ ಸಾಮಾಜಿಕ ಜಾಲತಾಣಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಸಾಧುಕೋಕಿಲ ” ನನ್ನ ಎಲ್ಲಾ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಮಸ್ಕಾರ, ಇನ್ನು ಮುಂದೆ ನನ್ನ ಸಿನಿಮಾ ಮಾಹಿತಿ ಮತ್ತು ಆಗೂ, ಹೋಗುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ನನ್ನ ಅಫೀಷಿಯಲ್ ಪೇಜ್. ಸಿನಿಮಾಗಳಿಗೆ ಚಪ್ಪಾಳೆ ತಟ್ಟಿ ಹೇಗೆ ನನ್ನ ಬೆಳೆಸಿದಿರೋ, ಇಲ್ಲಿ ನಿಮ್ಮ ಸಹಕಾರ ಇರಲಿ” ಎಂದು ಹೇಳಿಕೊಂಡಿದ್ದಾರೆ.

3.ಮಗಳಿಗೆ ದುನಿಯಾ ವಿಜಿ ಭರ್ಜರಿ ಗಿಫ್ಟ್: ದುನಿಯಾ ವಿಜಿ ತಮ್ಮ ಹಿರಿಯ ಪುತ್ರಿ ಮೋನಿಕಾಗೆ ವಿಷೇಶವಾದ ಉಡುಗೊರೆ ಕೊಟ್ಟಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ವಿಜಿ ದುಬಾರಿ ಬೆಲೆಯ ಕಾರು ಗಿಫ್ಟ್ ಮಾಡಿದ್ದಾರೆ. ಅಪ್ಪ ಮತ್ತು ಕಾರಿನ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು, ಲವ್ ಯು ಅಪ್ಪ ಎಂದು ಮೋನಿಕಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಡಿದ್ದಾರೆ. ವಿಜಯ್ ಪುತ್ರಿ ಮೋನಿಕಾ ಅಪ್ಪ ಕೊಡಿಸಿದ ಕೊಸ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ.

4.ವಿದೇಶದಲ್ಲೂ ಹಾರಿದ ಗಾಳಿಪಟ 2: ‘ಗಾಳಿಪಟ 2’ ಸಿನಿಮಾ ಕರ್ನಾಟಕ ಭಾರತದಲ್ಲಿ ಮಾತ್ರವಲ್ಲ, ಪ್ಯಾನ್ ಇಂಡಿಯ ಸಿನಿಮಾ ಅಲ್ಲದೇ ಇದ್ದರು, ಈ ಸಿನಿಮಾ ವಿದೇಶಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಿಥುವೇನಿಯಾದ ವಿಲ್ಲೇನಿಯಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಪ್ರದರ್ಶನ ಕಂಡಿದೆ. ಅಲ್ಲಿನ ಕನ್ನಡಿಗರೇ ಸೇರಿ ‘ಗಾಳಿಪಟ 2’ ಚಿತ್ರವನ್ನು ಪ್ರದರ್ಶಿಸಿ ಸಂಭ್ರಮಿಸಿದ್ದಾರೆ.

5. 50 ಕೋಟಿ ಗಳಿಸಿದ ರಶ್ಮಿಕಾ ಮಂದಣ್ಣ ‘ಸೀತಾ ರಾಮಂ’ ಸಿನಿಮಾ: ರಶ್ಮಿಕಾ ಮಂದಣ್ಣ ನಟನೆಯ ಸೀತಾ ರಾಮಂಸಿನಿಮಾ ಆಗಸ್ಟ್​ 5ರಂದು ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ವಿಮರ್ಶಕರು ಕೂಡ ಸಿನಿಮಾವನ್ನು ಹಾಡಿ ಹೊಗಳಿದರು. ಎಲ್ಲದರ ಪರಿಣಾಮವಾಗಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್​ ಆಗಿದೆ. ವಿಶ್ವಾದ್ಯಂತ ರಿಲೀಸ್​ ಆದ ‘ಸೀತಾ ರಾಮಂ’ ಸಿನಿಮಾ ಈವರೆಗೆ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬುದು ರಶ್ಮಿಕಾ ಮಂದಣ್ಣ ಪಾಲಿನ ಹೆಮ್ಮೆಯ ವಿಚಾರ. ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿ ಅವರ ಡಿಮ್ಯಾಂಡ್​ ಇನ್ನಷ್ಟು ಹೆಚ್ಚಾಗಿದೆ.

6.ಹಾಲಿವುಡ್ ಗೆ ಜೂನಿಯರ್ NTR ಎಂಟ್ರಿ: ಸೋಶಿಯಲ್ ಮೀಡಿಯಾದಲ್ಲಿ ಜೂ.ಎನ್‌ಟಿಆರ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಶೀಘ್ರದಲ್ಲಿಯೇ ಜೂ.ಎನ್‌ಟಿಆರ್ ಹಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಅಂತನೂ ಹೇಳಲಾಗಿದೆ. RRR ಸಿನಿಮಾ ನೋಡಿದ ಫಿಲ್ಮ್ ಮೇಕರ್‌ಗಳಿಗೆ ಜೂ. ಎನ್‌ಟಿಆರ್ ಪಾತ್ರ ಇಷ್ಟ ಆಗಿದ್ದರಿಂದ ಹಾಲಿವುಡ್ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು

 

- Advertisement -

Latest Posts

Don't Miss