Thursday, January 9, 2025

Latest Posts

ಧಾರವಾಡ ಬಂದ್: ಅಂಗಡಿ ಮುಗ್ಗಟ್ಟು ‘ಕ್ಲೋಸ್’- ಬಸ್ ಸಂಚಾರವಿಲ್ಲ, ಬಿಕೋ ಎನ್ನುತ್ತಿರುವ ರಸ್ತೆಗಳು..

- Advertisement -

Dharwad News: ಧಾರವಾಡ: ಕೇಂದ್ರ ಸಚಿವ ಅಮಿತ ಶಾ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಅವಳಿನಗರ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಪ್ರತಿಭಟನೆ ಆರಂಭಗೊಂಡಿದ್ದು, ಬಹುತೇಕ ಎಲ್ಲವೂ ಬಂದ್ ಆಗಿದೆ.

ಧಾರವಾಡದ ಜುಬ್ಲಿ ವೃತ್ತದಲ್ಲಿ ಪ್ರತಿಭಟನಾಕಾರರು ಹೋರಾಟ ಆರಂಭಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ನಗರದ ಬಹುತೇಕ ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಿವೆ. ಶಹರದ ಶಾಲೆಗಳಿಗೆ ರಜೆ ಕೊಟ್ಟಿದ್ದು, ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಹು-ಧಾ ಅವಳಿನಗರ ಬಂದ್ ಹಿನ್ನೆಲೆ ಪೊಲೀಸ್ ಕಮಿಷನರ್‌ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ದಲಿತ ಪರ ಸಂಘಟನೆಗಳಿಂದ ಹುಬ್ಬಳ್ಳಿ-ಧಾರವಾಡ ಬಂದ್ ಕರೆ ನೀಡಲಾಗಿದೆ. ರಾತ್ರಿಯಿಂದಲೂ ಅಧಿಕಾರಿ ಸಿಬ್ಬಂದಿ ಬಂದೋಬಸ್ತ್ ನಲ್ಲಿದ್ದಾರೆ. 2000ಕ್ಕೂ ಹೆಚ್ಚು ಪೋಲಿಸ್, ಹೋಂ ಗಾರ್ಡ್ಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಬಲವಂತದ ಬಂದ್ ಗೆ ಯಾವುದೇ ಅವಕಾಶ ನೀಡಿಲ್ಲ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. 10ಗಂಟೆ ಸುಮಾರಿಗೆ ಚನ್ನಮ್ಮ ವೃತ್ತದ ಬಳಿ ಎಲ್ಲಾ ಪ್ರತಿಭಟನಾಕಾರರು ಸೇರಲಿದ್ದಾರೆ. ಹೀಗಾಗಿ ಚನ್ನಮ್ಮ ವೃತ್ತಕ್ಕೆ ಸಂಪರ್ಕಿಸೋ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನ ಹಾಕಲಾಗಿದೆ. ಪ್ರತಿಭಟನಾಕಾರರು ಕೈಯಲ್ಲಿ ಕಲ್ಲು ಹಿಡಿದಿರೋದು, ವಾಹನಗಳ ಗಾಳಿ ತೆಗೆಯೋದು ಗಮನಕ್ಕಿಲ್ಲ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುತ್ತಿರುವುದು ಗಮನಕ್ಕೆ ಇಲ್ಲ. ಆ ರೀತಿ ಮಾಡುತ್ತಿರುವುದರ ಕುರಿತು ಗಮನ ಹರಿಸುತ್ತೇನೆ ಎಂದು ಕಮಿಷನರ್ ಹೇಳಿದರು.

- Advertisement -

Latest Posts

Don't Miss