Wednesday, March 12, 2025

Latest Posts

ಧಾರವಾಡ ಜಿಲ್ಲಾಡಳಿತದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಗೆ ಸಂಪೂರ್ಣ ಸಿದ್ಧತೆ

- Advertisement -

Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಗೆ ಸಂಪೂರ್ಣ ಸಿದ್ಧತೆ ನಡೆಸಿದೆ. ಎರಡು ಪರೀಕ್ಷೆ ಫಲಿತಾಂಶ ಧಾರವಾಡ ಜಿಲ್ಲೆ ಹಿಂದುಳಿಯುತ್ತಿರುವ ಹಿನ್ನೆಲೆ, ಫಲಿತಾಂಶ ಸುಧಾರಣೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ರಿಂದ ಮಿಶನ್ ವಿದ್ಯಾಕಾಶಿ ಆರಂಭ ಮಾಡಲಾಗಿದೆ.

ಜಿಲ್ಲೆಯ ಮಕ್ಕಳಲ್ಲಿ ವಿವಿಧ ರೀತಿಯ ತರಬೇತಿ, ಶಿಕ್ಷಣ ವ್ಯವಸ್ಥೆ ಮೂಲಕ ಶೈಕ್ಷಣಿಕ ಫಲಿತಾಂಶ ಸುಧಾರಣೆ ಮಾಡುವ ಗುರಿ ಇರುವ ಹಿನ್ನೆಲೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಂದ ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಲಾಯಿತು.

 

ಡಿಸಿ ದಿವ್ಯಪ್ರಭು, ಜಿಲ್ಲಾಪಂಚಾಯತ ಸಿಇಓ ಭುವನೇಶ್ ಪಾಟೀಲ್, ಡಿಸಿಪಿ ಮಹಾನಿಂಗ ನಂದಗಾವಿ ರಿಂದ ಜಂಟಿ ಸುದ್ದಿಗೋಷ್ಠಿ ನಡೆದಿದ್ದು, ಈ ಬಾರಿ ಧಾರವಾಡ ಜಿಲ್ಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಮಾಹಿತಿ ನೀಡಿದ್ದಾರೆ.

  • ಹೊಸದಾಗಿ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ 28,666.https://amzn.to/3D8k3Jm
  • ಹೊಸದಾಗಿ ಬಾಹ್ಯ ಅಭ್ಯರ್ಥಿಯಾಗಿ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ 511.
  • ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 1437.
  • ಪುನರಾವರ್ತಿತ ಭಾಹ್ಯ ಅಭ್ಯರ್ಥಿಗಳ ಸಂಖ್ಯೆ135.
  • ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆ ಬರೆಯುವವರ ವಿದ್ಯಾರ್ಥಿಗಳ ಒಟ್ಟು 30,749.
  • ಧಾರವಾಡ ಜಿಲ್ಲೆಯಲ್ಲಿ ಒಟ್ಟು ಹೈಸ್ಕೂಲ್ ಗಳ ಸಂಖ್ಯೆ 447,ಒಟ್ಟು ಪರೀಕ್ಷಾ ಕೇಂದ್ರಗಳು 106.
  • ಈ ಬಾರಿ ಪಿಯುಸಿ ಪರೀಕ್ಷೆ ಬರೆಯುವ ಧಾರವಾಡ ಜಿಲ್ಲೆಯ ಒಟ್ಟು ವಿದ್ಯಾರ್ಥಿಗಳು 27, 830
  • ಬಾಲಕರು 13,100, ಬಾಲಕಿಯರು 14,730
  • ಕಲಾ ವಿಭಾಗ 5,413, ವಾಣಿಜ್ಯ 8,464 , ವಿಜ್ಞಾನ 13,958
  • ಒಟ್ಟು ಕಾಲೇಜುಗಳ ಸಂಖ್ಯೆ 173, ಪರೀಕ್ಷಾ ಕೇಂದ್ರಗಳು 41

ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು, ಉತ್ತರ ಪತ್ರಿಕೆ ಪಾಲಕರು, ಸ್ಥಾನಿಕ ಜಾಗೃತ ದಳ, ತಾಲೂಕ ಜಾಗೃತ ದಳ ಮತ್ತು ಜಿಲ್ಲಾ ಜಾಗೃತ ದಳ ಸದಸ್ಯರನ್ನು ನೇಮಕ ಮಾಡಲಾಗಿದೆ. ಹೆಸ್ಕಾಂ ಅಧಿಕಾರಿಗಳಿಗೆ ಪರೀಕ್ಷಾ ದಿನದಂದು ತಡೆರಹಿತ ವಿದ್ಯುತ್ ಪೂರೈಸಲು ಸೂಚನೆ ನೀೀಡಲಾಗಿದೆ. ಪರೀಕ್ಷೆ ಮುಕ್ತಾಯದ ನಂತರ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಕೇಂದ್ರಗಳಿಗೆ ಅಂಚೆ ಮುಖಾಂತರ ರವಾನಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆ ಪತ್ರಿಕೆಗಳ ರವಾನೆ ಮಾಡುವ ವಾಹನಗಳಿಗೆ ಜಿ ಪಿ ಎಸ್ ಅಳವಡಿಕೆ ಮಾಡಲಾಗುವುದು.  ಜಿಲ್ಲೆಯಲ್ಲಿ ಒಟ್ಟು15 ಮಾರ್ಗಗಳನ್ನು ಗುರುತಿಸಿ, ಪ್ರತಿ ಮಾರ್ಗಕ್ಕೆ 3 ಜನ ಅಧಿಕಾರಿಗಳ ತ್ರಿ ಸದಸ್ಯ ಸಮಿತಿಯ ತಂಡ ರಚಿಸಿ, 45 ಅಧಿಕಾರಿಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗುತ್ತದೆ. ಪ್ರತಿ ಪರೀಕ್ಷೆ ಕೇಂದ್ರಗಳಿಗೆ ಜಾಗೃತದಳ,ಸಿಸಿಟಿವಿ, ವೆಬ್ ಕಾಸ್ಟಿಂಗ್ ಮೂಲಕ ಕಣ್ಗಾವಲು ಇರಿಸಲಾಗುತ್ತದೆ.

- Advertisement -

Latest Posts

Don't Miss