Friday, December 13, 2024

Latest Posts

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌ ನಡ್ಡಾ ಮೇಲಿನ ಪ್ರಕರಣಕ್ಕೆ ಮಧ್ಯಂತರ ತಡೆ ಧಾರವಾಡ ಹೈಕೋರ್ಟ್‌

- Advertisement -

Dharwad Political News: ಧಾರವಾಡ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್ಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌. ನಡ್ಡಾ ಮೇಲಿನ ಪ್ರಕರಣಕ್ಕೆ ಇದೀಗ ಧಾರವಾಡ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ವಿಧಾನ ಸಭೆ ಚುನಾವಣೆ ವೇಳೆ ಹಾವೇರಿ‌ ಜಿಲ್ಲೆಯ ಶಿಗ್ಗಾವಿಯಲ್ಲಿ‌ ಮೇ 1ರಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ‘ಮತದಾರರ ಮೇಲೆ ಮೋದಿ ಆಶೀರ್ವಾದ ಇರುತ್ತೆ ಎಂದಿದ್ದರು. ಈ ಮೂಲಕ ಮತದಾರರಿಗೆ ಆಮಿಷವೊಡ್ಡಿರುವ ಆರೋಪ ಕೇಳಿಬಂದಿತ್ತು.

ಪ್ರಕರಣಕ್ಕೆ ತಡೆ ಕೋರಿ ಧಾರವಾಡ ಹೈಕೋರ್ಟ್ ಮೇಟ್ಟಿಲೇರಿದ್ದ ನಡ್ಡಾ ಪರ ವಕೀಲರು
ಈ ಕುರಿತು ಚುನಾವಣಾ ಸಂಹಿತೆ ಅಧಿಕಾರಿಯಾಗಿದ್ದ ಲಕ್ಷ್ಮಣ ನಂದಿ ಎನ್ನುವವರು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ನಡ್ಡಾ ವಿರುದ್ಧ ದೂರು ದಾಖಲಿಸಿದ್ದರು. ನಿನ್ನೆ ದಿವಸ್ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.

ಇನ್ನು ವಿಜಯನಗರದ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲೂ ಕೂಡ ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಹೌದು, 2023 ಮೇ 07 ರಂದು ಬಹಿರಂಗವಾಗಿ ಭಾಷಣ ಮಾಡಿದ್ದ ಜೆಪಿ ನಡ್ಡಾ ವಿರುದ್ಧ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಆಧಾರ ರಹಿತವಾಗಿ ದಾಖಲಾದ ದೂರನ್ನು ರದ್ದು ಪಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇನ್ನು ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ್ ಅವರು ಇದ್ದ ಏಕಸದಸದಸ್ಯ ಪೀಠವು, ದಾಖಲಾದ ದೂರಿನಲ್ಲಿ ಮತದಾರರಿಗೆ ಆಮಿಷವೊಡ್ಡುವ ಯಾವುದೇ ಹೇಳಿಕೆಗಳು ಕಾಣಿಸಿಲ್ಲ ಎಂದು ದಾಖಲಾಗಿದ್ದ ದೂರನ್ನು ರದ್ದುಪಡಿಸಿತ್ತು.

‘ಕೇರಳ ಮಾಟ ಮಂತ್ರ ಮಾಡಿಸಿದ್ದರು: ಅದರಿಂದಲೇ‌ JDS ಅಸೆಂಬ್ಲಿ ಚುನಾವಣೆ ಸೋತಿದ್ದು’

Income Tax : ಐಟಿ ದಾಳಿ : 40 ಕೋಟಿಗೂ ಅಧಿಕ ಹಣ ಲಭ್ಯ…!

‘ನಾವು ಮೈತ್ರಿ ಯಾರ ಜೊತೆಗಾದ್ರು ಮಾಡಿಕೊಳ್ತೀವಿ ಇವರಿಗೇನು..?’

- Advertisement -

Latest Posts

Don't Miss