Dharwad News: ಧಾರವಾಡ: ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರ ಸಾವು ಹಿನ್ನೆಲೆ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 140 ಗರ್ಭಿಣಿ ಮಹಿಳೆಯರ ಸಾವಾಗಿದ್ದು, ಈ ಬಗ್ಗೆ ಮಾಹಿತಿ ಪಡೆದಿರುವ ಡಿಸಿ, ಹೈಪರ್ ಟೆನ್ಶ್ಯನ್, ರಕ್ತಸ್ರಾವದಿಂದ ಬೇರೆ ಬೇರೆ ಕಾರಣಗಳಿಗೆ ಸಾವಾಗಿದೆ ಎಂದಿದ್ದಾರೆ.
2022_23 ನೇಯ ಸಾಲಿನಲ್ಲಿ 63 ಗರ್ಭಿಣಿಯರು ಸಾವು ಅದರಲ್ಲಿ 24 ಜನ ಮಹಿಳೆಯರು ಧಾರವಾಡ ಜಿಲ್ಲೆಯವರು. 2023_24 ನೇಯ ಸಾಲಿನಲ್ಲಿ 43 ಗರ್ಭಿಣಿಯರು ಸಾವು ಅದರಲ್ಲಿ 12 ಜನ ಮಹಿಳೆಯರು ಧಾರವಾಡ ಜಿಲ್ಲೆಯವರು. 2024_25 ನೇಯ ಸಾಲಿನಲ್ಲಿ 35 ಗರ್ಭಿಣಿ ಮಹಿಳೆಯರು ಸಾವು, ಅದರಲ್ಲಿ 11 ಜನ ಮಹಿಳೆಯರು ಧಾರವಾಡ ಜಿಲ್ಲೆಯವರು. ಮಹಿಳೆಯರು ನಾನಾ ಕಾರಣಗಳಿಂದ ಸಾವನ್ನಪ್ಪಿರುವ ಬಗ್ಗೆ ಡಿಸಿಎಂ ಮಾಹಿತಿ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಗರ್ಭಿಣಿ ಮಹಿಳೆಯರಿಗಿಂತ, ಹೊರ ಜಿಲ್ಲೆಯ ಗರ್ಭಿಣಿ ಮಹಿಳೆಯರ ಸಾವು ಹೆಚ್ಚಳವಾಗಿದೆ. ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೇರಿಗೆಗೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಇನ್ನು ಈ ಬಗ್ಗೆ ಪ್ರತೀ ವರ್ಷ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಸಂಗ್ರಹ ಮಾಡಿಕೊಂಡಿದ್ದು, H M V ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ ಸದ್ಯ ದಾಖಲಾಗಿರುವ ಗರ್ಭಿಣಿಯರು, ಹೆರಿಗೆಯಾದ ಮಹಿಳೆಯರ ಆರೋಗ್ಯ ವಿಚಾರಿಸಿದ್ದಾರೆ.




