Monday, September 9, 2024

Latest Posts

ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ದಾಳಿ: ಡಬಲ್ ಪೇಮೆಂಟ್ ಹಗರಣ ಕೇಸ್‌ಗೆ ಇಡಿ ಎಂಟ್ರಿ

- Advertisement -

Dharwad News: ಧಾರವಾಡ: ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಅಧಿಕಾರಿಗಳು, ಧಾರವಾಡದ ಲಕ್ಕಮನಹಳ್ಳಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಹಿಂದಿನ ಕೆಐಎಡಿಬಿ ವಿಶೇಷಾಧಿಕಾರಿ ವಿ.ಡಿ. ಸಜ್ಜನ್ ಸೇರಿ ಅನೇಕರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಡಬಲ್ ಪೇಮೆಂಟ್ ವಿಚಾರವಾಗಿ ಈ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಒಂದು ಸಲ ಭೂಸ್ವಾಧೀನ ಆಗಿದ್ದ ರೈತರ ಖಾತೆಗೆ ಪುನಃ ಹಣ ಹಾಕಿದ್ದಾರೆಂಬ ಆರೋಪವಿತ್ತು. ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದ ಹಗರಣ ಇದಾಗಿತ್ತು.

ಈ ಸಂಬಂಧ ಈ ಹಿಂದೆ ಸಿಐಡಿಯಿಂದ ಈ ಬಗ್ಗೆ ತನಿಖೆ ನಡೆದಿತ್ತು. ಈ ತನಿಖೆಯಲ್ಲಿ 20 ಕೋಟಿ ಹಗರಣ ನಡೆದ ವಿಚಾರ ಪತ್ತೆಯಾಗಿತ್ತು.  ಬಳಿಕ ಅಧಿಕಾರಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿದ್ದು, ಕಚೇರಿಯ ದಾಖಲೆಗಳನ್ನು ಇಡಿ ತಂಡ ಪರಿಶೀಲಿಸುತ್ತಿದೆ.

- Advertisement -

Latest Posts

Don't Miss