Dharwad News: ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೆಲುವಿಗಾಗಿ ಅಭಿಮಾನಿಯೊಬ್ಬರು ದೇವರ ಮೊರೆ ಹೋಗಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ವಿನೋದ್ ಅಸೂಟಿ ಅಭಿಮಾನಿ, ದೇವರ ಮೊರೆ ಹೋಗಿದ್ದು, ಕವಡೆ ಶಾಸ್ತ್ರದಲ್ಲೂ ವಿನೋದ್ ಅಸೂಟಿ ಗೆಲುವು ಸಾಧಿಸುತ್ತಾರೆಂದು ಹೇಳಿತ್ತಂತೆ.
ಇದೀಗ ದೇವರ ಕಲ್ಲಿನ ಮೊರೆ ಹೋಗಿರುವ ಈ ಅಭಿಮಾನಿ, ಕಲ್ಲನ್ನು ಎತ್ತಲು ಪ್ರಯತ್ನಿಸುವ ಮೂಲಕ ತನ್ನ ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾನೆ. ಏನಾದರೂ ಪ್ರಶ್ನೆ ಕೇಳಿ, ಕಲ್ಲನ್ನು ಎತ್ತಲು ಪ್ರಯತ್ನಿಸಿದಾಗ, ಆ ಕಲ್ಲು ಎತ್ತಲು ಸಾಧ್ಯವಾದರೆ, ಧನಾತ್ಮಕ ಫಲಿತಾಂಶ ಬರುತ್ತದೆ ಎಂದರ್ಥ. ಕಲ್ಲು ಎತ್ತಲು ಸಾಧ್ಯವಾಗದಿದ್ದಲ್ಲಿ, ಋಣಾತ್ಮಕ ಫಲಿತಾಂಶ ಬರುತ್ತದೆ ಎಂದರ್ಥ.
ಈ ಅಭಿಮಾನಿ ವೀಡಿಯೋ ಮಾಡಿ, ವಿನೋದ್ ಅಸೋಟಿ ಗೆಲ್ಲುತ್ತಾರಾ ಎಂದು ಕೇಳಿ, ಕಲ್ಲು ಎತ್ತಿದ್ದಾನೆ. ಕಲ್ಲು ಎತ್ತಲು ಸಾಧ್ಯವಾಗಿದ್ದು, ವಿನೋದ್ ಅಸೂಟಿ ಗೆಲ್ಲುತ್ತಾರೆ ಎಂದಿದ್ದಾನೆ. ಬಳಿಕ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರಾ ಎಂದು ಪ್ರಶ್ನಿಸಿ, ಕಲ್ಲು ಎತ್ತಲು ಪ್ರಯತ್ನಿಸಿದ್ದಾನೆ. ಆಗ ಕಲ್ಲು ಎತ್ತಲ ಸಾಧ್ಯವಾಗಿಲ್ಲ. ಹಾಗಾಗಿ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರೆ ಎಂದು ಹೇಳಿದ್ದಾನೆ.
ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ
Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

